ಆಕ್ಷನ್, ರೌಡಿಸಂ ಕಥಾಹಂದರ ಹೊಂದಿರುವ ಬಹುನಿರೀಕ್ಷಿತ “ ಬೇಲ್” ಚಿತ್ರದ ಟೀಸರ್ ಬಿಡುಗಡೆಯಾಗಿ ಗಮನ ಸೆಳೆದಿದೆ.
ಶಿವರಾಜ್‍ಕುಮಾರ್, ಮಲೆಯಾಳಂ ನಟ ಜಯರಾಮ್, ಹಿರಿಯ ನಟರಾದ ಸಾಯಿ ಕುಮಾರ್, ಗೋಪಾಲ ಕೃಷ್ಣ ದೇಶಪಾಂಡೆ, ರಮೇಶ್ ಇಂದಿರಾ, ರಮೇಶ್ ಭಟ್, ಸುನೀಲ್ ಪುರಾಣಿಕ್, ಯೋಗಿ, ಕಿರಣ್ ಶ್ರೀನಿವಾಸ್, ದೀಕ್ಷಿತ್ ಶೆಟ್ಟಿ, ನಟಿ ಸಂಜನಾ ಆನಂದ್ ಸೇರಿದಂತೆ ಹಲವು ಕಲಾವಿದರು ಇರುವ ಟೀಸರ್ ಚಿತ್ರದ ಮೇಲಿನ ಕುತೂಹಲ ಹೆಚ್ಚು ಮಾಡಿದೆ.
ಪವನ್ ಒಡೆಯರ್ ಆಕ್ಷನ್ ಕಟ್ ಹೇಳಿರುವ ಚಿತ್ರದಲ್ಲಿ ಶಿವಣ್ಣ ಎಂದಿನ ತಮ್ಮ ಖಡಕ್ ಶೈಲಿ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದಾರೆ. ಘಟಾನುಘಟಿ ನಟರ ಕಾಂಬಿನೇಷನ್ ಮತ್ತು ಸಂಭಾಷಣೆಗಳು ಟೀಸರ್ ನ ಹೈಲೈಟ್ ಆಗಿದ್ದು, ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ.
ಚಿತ್ರಕ್ಕೆ ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಟೀಸರ್ ನ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತಿದೆ. ವೈದಿ ಛಾಯಾಗ್ರಹಣ ಹಾಗೂ ಶಶಾಂಕ್ ನಾರಾಯಣ ಚುರುಕಾದ ಸಂಕಲನ ಚಿತ್ರಕ್ಕಿದೆ.
ಕುತೂಹಲ ಕೆರಳಿಸಿರುವ ‘ಬೇಲ್’ ಸಿನಿಮಾ ಅಕ್ಟೋಬರ್ 2 ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆ ಕಾಣಲಿದೆ.
—-





Be the first to comment