ತುಪ್ಪದ ಬೆಡಗಿ ಬಿಡುಗಡೆಗೊಳಿಸಿದ ‘ಸಾಗುತ ದೂರ ದೂರ’ ಧ್ವನಿಸಾಂದ್ರಿಕೆ

‘ಸಾಗುತ ಸಾಗುತ ದೂರ ದೂರ’ ಚಿತ್ರದ ಎರಡನೇ ಟ್ರೇಲರ್ ಮತ್ತು ಧ್ವನಿ ಸಾಂದ್ರಿಕೆಯನ್ನು ನಟಿ ರಾಗಿಣಿ ಬಿಡುಗಡೆಗೊಳಿಸಿದರು. ‘ಒಳ್ಳೆಯ ಕಂಟೆಂಟ್ ಇದ್ದರೂನು ಚಿತ್ರಗಳು ಜನರಿಗೆ ತಲುಪುತ್ತಿಲ್ಲ. ಈ‌ಚಿತ್ರದ ಟ್ರೇಲರ್ ತುಂಬಾ ವಿಭಿನ್ನವಾಗಿದೆ. ಜನ ಈ ಫಿಲ್ಮ್ ನೋಡಿ ಪ್ರೋತ್ಸಾಹಿಸಲಿ’’ ಎಂದು ಹೇಳಿ ವಿಶ್ ಮಾಡಿದರು.
ನಿರ್ಮಾಪಕ ಅಮಿತ್ ಅವರು ಮಾಧ್ಯಮವನ್ನು ಉದ್ದೇಶಿಸಿ ನಿರ್ದೇಶಕ ರವಿತೇಜ ಕತೆ ಹೇಳುವಾಗ ತಾಯಿಯ ಮೇಲಿರುವ ಸಿನಿಮಾ ಎಂದು ತಿಳಿಯಿತು. ನನಗೆ ತಾಯಿ ಅಂದರೆ ತುಂಬಾ ಪ್ರೀತಿ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದರು.
ನಾನು ಈ ಮೊದಲೇ ಜಾತ್ರೆ ಎಂಬ ಸಿನಿಮಾವನ್ನು ನಿರ್ದೇಶನ ಮಾಡಿದ್ದೇನೆ. ಇದು ನನ್ನ ಎರಡನೇ ಸಿನಿಮಾ.  ನನ್ನ ಮಗ ಆಶಿಕ್ ಪ್ರಧಾನ‌ಪಾತ್ರದದಲ್ಲಿ ಅಭಿನಯಿಸಿದ್ದಾನೆ. ಈ ಚಿತ್ರ ಚೆನ್ನಾಗಿ ಓಡಲಿ ಎಂದು ನನ್ನ ಹಾರೈಕೆ. ತುಂಬಾ ನಷ್ಟ ಅನುಭವಿಸಿದ್ದೇನೆ. ಈ ಸಿನಿಮಾ ಚೆನ್ನಾಗಿ ಓಡದಿದ್ದರೆ ನಾನು ಚಿತ್ರೋದ್ಯಮ ಬಿಡುವುದು ಖಚಿತ ಎಂದರು.
ಉಷಾ ಭಂಡಾರಿ ಮಾತನಾಡಿ, ಈ ಸಿನಿಮಾದಲ್ಲಿ 7 ಜನ ನನ್ನ ಶಿಷ್ಯಂದಿರು ಕೆಲಸ ಮಾಡಿದ್ದಾರೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದರು. ಮುಖ್ಯ ಭೂಮಿಕೆಯಲ್ಲಿರುವ ದೀಕ್ಷಿತ್, ಮಹೇಶ್, ಅಪೇಕ್ಷಾ ಪುರೋಹಿತ್, ಜಾಹ್ನವಿ, ಆರತಿ ಮೊದಲಾದವರು ಉಪಸ್ಥಿತರಿದ್ದರು.
This Article Has 2 Comments
  1. Pingback: CI-CD Pipeline

  2. Pingback: Fake Rolex

Leave a Reply

Your email address will not be published. Required fields are marked *

Translate »
error: Content is protected !!