ಅಮ್ಮಚ್ಚೆಯೆಂಬ ನೆನಪು ಚಿತ್ರದ ಧ್ವನಿಸುರುಳಿ ಬಿಡುಗಡೆಯನ್ನು ಮೊನ್ನೆ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಹಕ್ಕು, ಅಮ್ಮಚ್ಚಿಯೆಂಬ ನೆನಪು ಹಾಗೂ ಪುಟ್ಟಮ್ಮತ್ತೆ ಮತ್ತು ಮೊಮ್ಮಗ ಎಂಬ ಕಾದಂಬರಿಯು ಈಗಾಗಲೇ ನಾಟಕ ರೂಪದಲ್ಲಿದೆ, ಈಗ ಅದಕ್ಕೆ ಸಿನಿಮಾ ಸ್ಪರ್ಶವನ್ನು ನೀಡಲಾಗಿದೆ.
ನಾಗತಿಹಳ್ಳಿ ಚಂದ್ರಶೇಖರ್ ಅವರು ಮಾತನಾಡಿ, ಒಂದು ಪ್ರಯೋಗಾತ್ಮಕ ಚಿತ್ರವನ್ನು ನಿರ್ದೇಶಿಸಿರುವ ಚಂಪಾ ಅವರ ಜಾಣ್ಮೆಯನ್ನು ಮೆಚ್ಚಲೇಬೇಕು. ಕಾದಂಬರಿಯನ್ನು ಚಿತ್ರರೂಪಕ್ಕೆ ಇಳಿಸುವುದು ತುಂಬಾ ಕಷ್ಟದ ಕೆಲಸ ಆದರೆ ಅದನ್ನು ನಿರ್ದೇಶಕರು ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ. ಇಲ್ಲಿ ರಂಗಭೂಮಿ ಹಾಗೂ ಸಾಹಿತ್ಯ ಸಮ್ಮಿಲನಗೊಂಡಿರುವುದರಿಂದ ಸಮಾರಂಭದ ಕಲೆ ಹೆಚ್ಚಿದೆ. ಕಡಿಮೆ ಬಂಡವಾಳದ ಚಿತ್ರಗಳು ಪ್ರೇಕ್ಷಕರ ಮನ ಸೆಳೆದಿರುವಂತೆ ಅಮ್ಮಚ್ಚಿ ಚಿತ್ರವೂ ಹಣ ಹಾಗೂ ಕೀರ್ತಿಯನ್ನು ಗಳಿಸುವ ಮೂಲಕ ಮತ್ತಷ್ಟು ಪ್ರಯೋಗಾತ್ಮಕ ಚಿತ್ರಗಳು ಹೊಮ್ಮಿಬರಲು ಸ್ಫೂರ್ತಿಯಾಗಲಿ ಎಂದರು.
ಲೇಖಕಿ ವೈದೇಹಿ ಮಾತನಾಡಿ, ನಾನು ಬರೆದ ಕಥೆಗಳು ಬಹಳಷ್ಟು ನಾಟಕದ ರೂಪ ಪಡೆದಿದೆ, ನಾನು ನಾಟಕವನ್ನು ನೋಡುವುದಿಲ್ಲ ಆದರೆ ಹಕ್ಕು ನಾಟಕವನ್ನು ನೋಡಲು ಮುಂಬೈಗೆ ಹೋಗಿದ್ದೆ, ಈಗ ಇದು ಸಿನಿಮಾ ರೂಪಕ್ಕೆ ಬಂದಿದ್ದು ಇದರಲ್ಲಿ ಕುಂದಾಪುರದ ಕನ್ನಡವನ್ನು ಬಳಸಿರುವುದು ನನಗೆ ತುಂಬಾ ಖುಷಿ ಕೊಟ್ಟಿದೆ. ಇದು ಕೇವಲ ಹೆಣ್ಣಿನ ಕಥೆಯಲ್ಲ, ಮಾನವಲೋಕದ ಹಿಂಸೆಯ ಕಥೆ. ಸಮಾಜದಲ್ಲಿ ಹೆಣ್ಣಿನ ಮೇಲೆ ಆಗುತ್ತಿದ್ದ ದೌರ್ಜನ್ಯವನ್ನು ಹಕ್ಕುವಿನಲ್ಲಿ ಬರೆದಿದ್ದೆ. ಈ ಚಿತ್ರವು ನಿರ್ಮಾಪಕರಿಗೆ ಲಾಭವನ್ನು ತಂದುಕೊಡುವಂತಾಗಲಿ ಎಂದು ಹಾರೈಸಿದರು.
Pingback: DevSecOps solutions