ಬಾಲಿವುಡ್ ನಟಿ ಆಲಿಯಾ ಭಟ್, ಶಾರ್ವರಿ ವಾಘ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ‘ಆಲ್ಫಾ’ ಸಿನಿಮಾ ಆಗಸ್ಟ್ 28ರಿಂದ ‘ಆಲ್ಫಾ’ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.
ಶಿವ ರವೈಲ್ ನಿರ್ದೇಶನದ ‘ಆಲ್ಫಾ’ ಸಿನಿಮಾ ‘ಆಲ್ಫಾ’ ಎಂಬ ಶಕ್ತಿಶಾಲಿ ಸೀರಮ್ ಪ್ರಯೋಗದ ಮೂಲಕ ಸೀತಾಳನ್ನು ಸೂಪರ್-ಸೋಲ್ಜರ್ ಆಗಿ ಬದಲಾಯಿಸುವ ಕಥೆಯನ್ನು ಒಳಗೊಂಡಿದೆ. ಆಲಿಯಾ ಭಟ್ ಅವರು ಸೀತಾ ಎಂಬ ತರಬೇತಿ ಪಡೆದ ರಾ ಏಜೆಂಟ್, ಶಾರ್ವರಿ ಅವರು ದುರ್ಗಾ ಕೌಲ್ ಎಂಬ ಆಕೆಯ ಸಹೋದರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಕರ್ನಲ್ ಫತೇಹ್ ಸಿಂಗ್ ಲಖಾವತ್’ ಎಂಬ ಖಳನಾಯಕನ ಪಾತ್ರವನ್ನು ಬಾಬಿ ಡಿಯೋಲ್ ಮಾಡಿದ್ದಾರೆ.
ಸುಮಾರು 100 ಕೋಟಿ ರೂಪಾಯಿ ನಿರ್ಮಾಣ ವೆಚ್ಚದಲ್ಲಿ ಮೂಡಿಬಂದಿದ್ದ ‘ಆಲ್ಫಾ’ ಚಿತ್ರ ಥಿಯೇಟರ್‌ಗಳಲ್ಲಿ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 58.86 ಕೋಟಿ ರೂಪಾಯಿ ಗಳಿಕೆ ಮಾಡಿದ್ದ ಈ ಸಿನಿಮಾ, ವಿದೇಶಿ ಮಾರುಕಟ್ಟೆಯಿಂದ ಸುಮಾರು 29.05 ಕೋಟಿ ರೂಪಾಯಿ ಬಾಚಿಕೊಂಡಿತ್ತು.
ವೈಆರ್‌ಎಫ್ ಸ್ಪೈ ಯೂನಿವರ್ಸ್‌ನ ಮೊದಲ ಮಹಿಳಾ ಪ್ರಧಾನ ಆ್ಯಕ್ಷನ್ ಥ್ರಿಲ್ಲರ್ ಚಿತ್ರ ‘ಆಲ್ಫಾ’ ಗೆ ಈಗ ಒಟಿಟಿ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಬೇಕು.
—





Be the first to comment