ನಿರ್ದೇಶಕ: ಎ ಆರ್ ಸಾಯಿ ರಾಮ್
ನಿರ್ಮಾಣ: ಆನಂದ ಬಾಬು
ತಾರಾಗಣ: ವಿವಾನ್, ಅನುಷಾ ರೈ, ಯಶ್ ಶೆಟ್ಟಿ, ಮುಂತಾದವರು..
ರೇಟಿಂಗ್: 3.5/5
ಧೈರ್ಯ ಇದ್ದರೆ ಜೀವನದಲ್ಲಿ ಏನನ್ನು ಸಾಧಿಸಬಹುದು ಎಂದು ಹೇಳುವ ಚಿತ್ರ ಧೈರ್ಯಂ ಸರ್ವತ್ರ ಸಾಧನಂ.
ಈ ವಾರ ತೆರೆಗೆ ಬಂದಿರುವ ಈ ಚಿತ್ರದಲ್ಲಿ ಮೇಲ್ಜಾತಿ- ಕೆಳಜಾತಿಯ ಸಂಘರ್ಷ, ಶ್ರೀಮಂತ ಹಾಗೂ ಬಡವರ ನಡುವಿನ ಸಂಘರ್ಷ, ಗುಲಾಮಗಿರಿಯನ್ನು ಮೆಟ್ಟಿ ನಿಲ್ಲುವ ಹಠ ಈ ಎಲ್ಲವೂ ಇದೆ. ಕೊನೆಗೆ ಸಾಮಾನ್ಯ ಯುವಕ ಶ್ರೀಮಂತರ ದರ್ಪದ ವಿರುದ್ಧ ಗೆಲ್ಲುತ್ತಾನಾ ಎನ್ನುವುದು ಚಿತ್ರದ ಕಥೆಯಾಗಿದೆ.
ಬಂದೂಕು ಸ್ವಾಭಿಮಾನದ ಸಂಕೇತ. ಅದನ್ನು ಕಳೆದುಕೊಳ್ಳಬೇಡ ಎಂದು ತಂದೆ ಮಗನಿಗೆ ಹೇಳುತ್ತಾನೆ. ಇದೇ ವೇಳೆ ತಾಯಿ ಸರ್ಕಾರಿ ಕೆಲಸ ಮಾಡು ಎಂದು ಸಲಹೆ ನೀಡುತ್ತಾಳೆ. ತಾಯಿಯ ಕನಸು ಕಮರಿ ಹೋಗುತ್ತದೆ ಎನ್ನುವ ಸಂದರ್ಭದಲ್ಲಿ ಯುವಕನಿಗೆ ನೆರವಿಗೆ ಬರುವುದು ಧೈರ್ಯ ಮಾತ್ರ. ಧೈರ್ಯ ಯುವಕನ ಕೈ ಹೇಗೆ ಹಿಡಿಯುತ್ತದೆ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕು.
ಚಿತ್ರದಲ್ಲಿ ಆರ್ಯ ಮತ್ತು ದ್ರಾವಿಡ ಎನ್ನುವ ಎರಡು ಪಾತ್ರಗಳ ಮೂಲಕ ಸಂಘರ್ಷ ಮತ್ತು ಸಿದ್ಧಾಂತಗಳನ್ನು ಚಿತ್ರದಲ್ಲಿ ಹೆಣೆಯುವ ಯತ್ನವನ್ನು ಮಾಡಲಾಗಿದೆ. ಇಲ್ಲಿ ದ್ರಾವಿಡ ನಾಯಕ ಆದರೆ ಆರ್ಯನನ್ನು ಖಳ ನಾಯಕ ಎನ್ನುವಂತೆ ಬಿಂಬಿಸಲಾಗಿದೆ. ಮಹಾನ್ ಪುರುಷರ ಸಿದ್ಧಾಂತಗಳನ್ನು ಪಾತ್ರದ ಮೂಲಕ ತೋರಿಸುವ ಯತ್ನವನ್ನು ಮಾಡಲಾಗಿದೆ.
ನಿರ್ದೇಶಕರು ಚಿತ್ರದಲ್ಲಿ ಸೂಕ್ಷ್ಮವಾದ ವಿಚಾರಗಳನ್ನು ಜೊತೆಗೆ ಹಲವು ಗಹನ ವಿಷಯಗಳನ್ನು ಹೇಳುವ ಯತ್ನ ಮಾಡಿದ್ದಾರೆ. ಕೆಲವೊಮ್ಮೆ ಇದು ಹೇರಿಕೆ ಅನಿಸುತ್ತದೆ. ಕೊನೆಗೆ ಚಿತ್ರ ಪ್ರೇಕ್ಷಕರು ಅಂದುಕೊಂಡ ರೀತಿಯಲ್ಲಿ ಮುಂದಕ್ಕೆ ಸಾಗುತ್ತದೆ.
ಚಿತ್ರದ ಕಲಾವಿದರು ಎಲ್ಲರೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸುವ ಯತ್ನ ಮಾಡಿದ್ದಾರೆ. ಜೂಡ್ ಸ್ಯಾಂಡಿ ಸಂಗೀತ ಚಿತ್ರಕ್ಕೆ ಮೆರಗು ನೀಡಿದೆ.
____
Be the first to comment