ಜುಲೈ 5ಕ್ಕೆ ಆಮೀರ್ ಮೂರನೇ ಮದುವೆ

ಬಾಲಿವುಡ್ ನಟ ಆಮೀರ್ ಖಾನ್ ತಮ್ಮ ಬಹುಕಾಲದ ಗೆಳತಿ ಗೌರಿ ಸ್ಪ್ರ್ಯಾಟ್ ಅವರನ್ನು ಜುಲೈ 5ರಂದು ವಿವಾಹವಾಗಲಿದ್ದಾರೆ.

ಆಮೀರ್ ಖಾನ್  ಕಳೆದ ವರ್ಷ ತಮ್ಮ 60ನೇ ಜನ್ಮದಿನದ ಸಂದರ್ಭದಲ್ಲಿ ಮೊದಲ ಬಾರಿಗೆ ಗೌರಿ ಸ್ಪ್ರ್ಯಾಟ್ ಅವರನ್ನು ಸಾರ್ವಜನಿಕವಾಗಿ ಪರಿಚಯಿಸಿದ್ದರು. ಹಲವು ತಿಂಗಳುಗಳಿಂದ ಇಬ್ಬರೂ ಸಂಬಂಧದಲ್ಲಿದ್ದು, ಆ ಸಂಬಂಧ ಮದುವೆಯ ಹಂತ ತಲುಪಿದೆ ಎಂದು ಹೇಳಲಾಗುತ್ತಿದೆ.

ಗೌರಿ ಸ್ಪ್ರ್ಯಾಟ್ ಮೂಲತಃ ಬೆಂಗಳೂರಿನವರು. ಅವರು ಪ್ರಸಿದ್ಧ ಹೇರ್ ಸ್ಟೈಲಿಸ್ಟ್ ರೀಟಾ ಸ್ಪ್ರ್ಯಾಟ್ ಅವರ ಪುತ್ರಿ. ಲಂಡನ್‌ನ ಯೂನಿವರ್ಸಿಟಿ ಆಫ್ ದಿ ಆರ್ಟ್ಸ್‌ನಲ್ಲಿ ಅವರು ಫ್ಯಾಶನ್ ಶಿಕ್ಷಣ ಪಡೆದಿದ್ದಾರೆ. ಸದ್ಯ ಮುಂಬೈನಲ್ಲಿ ಸ್ವಂತ ಸಲೂನ್ ವ್ಯವಹಾರ ನಡೆಸುತ್ತಿದ್ದಾರೆ. ಅವರಿಗೆ ಏಳು ವರ್ಷದ ಮಗುವಿದೆ ಎನ್ನಲಾಗಿದೆ.

ಇದು ಆಮೀರ್ ಖಾನ್ ಅವರ ಮೂರನೇ ಮದುವೆ. ಆಮೀರ್ 1986ರಲ್ಲಿ ಬಾಲ್ಯದ ಗೆಳತಿ ರೀನಾ ದತ್ತಾ ಅವರನ್ನು ವಿವಾಹವಾಗಿ ಜುನೈದ್ ಮತ್ತು ಇರಾ ಎಂಬ ಇಬ್ಬರು ಮಕ್ಕಳ ತಂದೆಯಾಗಿದ್ದರು. 2002ರಲ್ಲಿ ಈ ದಾಂಪತ್ಯ ಅಂತ್ಯಗೊಂಡ  ಬಳಿಕ 2005ರಲ್ಲಿ ನಿರ್ದೇಶಕಿ ಕಿರಣ್ ರಾವ್ ಅವರನ್ನು ಮದುವೆಯಾಗಿದ್ದರು. 2021ರಲ್ಲಿ ಪರಸ್ಪರ ಒಪ್ಪಿಗೆಯೊಂದಿಗೆ ಬೇರ್ಪಟ್ಟಿದ್ದರು. ಈ ದಂಪತಿಗೆ ಸರೊಗಸಿ ಮೂಲಕ ಜನಿಸಿದ ಆಜಾದ್ ಎಂಬ ಮಗನಿದ್ದಾನೆ.

ಆಮೀರ್ ಖಾನ್ ತಮ್ಮ ಸಂಬಂಧವನ್ನು  ಪೂರ್ಣ ಗೌಪ್ಯವಾಗಿಟ್ಟಿದ್ದರು. ಬಳಿಕ ಮಾಧ್ಯಮಗಳ ಮುಂದೆ ಗೌರಿ ಅವರನ್ನು ಪರಿಚಯಿಸಿದ್ದರು.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!