ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾ ಎಂದು ಭಾರೀ ನಿರೀಕ್ಷೆ ಮೂಡಿಸಿರುವ ‘ಜನ ನಾಯಗನ್’ ಚಿತ್ರಕ್ಕೆ ‘A’ ಪ್ರಮಾಣಪತ್ರ ಸಿಕ್ಕಿದೆ ಎನ್ನಲಾಗುತ್ತಿದೆ.
2026ರ ಸಂಕ್ರಾಂತಿಗೆ ಬಿಡುಗಡೆ ಮಾಡಲು ಯೋಜಿಸಿದ್ದ‘ಜನ ನಾಯಗನ್’ ಸಿನಿಮಾ ಹಲವು ಕಾರಣಗಳಿಂದ ಮುಂದೂಡಲ್ಪಟ್ಟಿದ್ದು, ಇದುವರೆಗೆ ಚಿತ್ರತಂಡ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ. ಜುಲೈ ಮಧ್ಯಭಾಗದಲ್ಲಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈಗಾಗಲೇ ಚಿತ್ರದ ಕೆಲ ದೃಶ್ಯಗಳು ಸೋರಿಕೆಯಾಗಿರುವ ಕಾರಣಚಿತ್ರದ ಮೇಲಿನ ಕುತೂಹಲಕ್ಕೆ ಹೊಡೆತ ಬಿದ್ದಿದೆ. ಇದೇ ಕಾರಣಕ್ಕೆ ಚಿತ್ರವನ್ನು ಹೆಚ್ಚು ವಿಳಂಬ ಮಾಡದೆ ಒಂದೆರಡು ವಾರಗಳ ಪ್ರದರ್ಶನ ಗುರಿಯೊಂದಿಗೆ ಬಿಡುಗಡೆ ಮಾಡುವ ಆಲೋಚನೆ ನಿರ್ಮಾಪಕರದ್ದಾಗಿದೆ. ಇದೇ ಲೆಕ್ಕಾಚಾರದಲ್ಲಿ ಯಶ್ ಅಭಿನಯದ ‘ಟಾಕ್ಸಿಕ್’ ಬಿಡುಗಡೆಯ 20 ದಿನಗಳ ಮುಂಚಿತವಾಗಿ ಸಿನಿಮಾ ತೆರೆಗೆ ತರಲು ಚಿಂತನೆ ನಡೆದಿದೆ.
ಎಚ್. ವಿನೋದ್ ನಿರ್ದೇಶಿಸಿರುವ ‘ಜನ ನಾಯಗನ್’ ಚಿತ್ರದಲ್ಲಿ ವಿಜಯ್ ಜೊತೆಗೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ.
‘ಜನ ನಾಯಗನ್’ ಬಿಡುಗಡೆ ವರದಿಗಳಿಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ.
—–





Be the first to comment