ಮಿನ ಮಿನುಗುತ್ತಿರುವ ಮಿನುಗುತಾರೆ.
ತಮ್ನಂ ತಮ್ನಂ ನನ್ನೀ ಮನಸ್ಸು ಮಿಡಿಯುತ್ತಿದೆ.. ಅಂತ ಎಲ್ಲರ ಮನಸ್ಸಲ್ಲಿ ಮಿನುಗು ತಾರೆಯಾಗಿ ಉಳಿದಿದ್ದು ನಟಿ ಕಲ್ಪನಾ.. ಈಕೆಯ ನೋಟ, ನಟನೆ, ಡೈಲಾಗ್ ಡೆಲಿವರಿ ನೋಡಿದ್ರೆ ಯಾರು ಕೂಡ ಮೀರಿಸುವವರೇ ಇಲ್ಲ. ಅಂತಹ ಅಧ್ಭುತ ಕಾಲವಿದೆ ಕಲ್ಪನಾ. ಈಗಲೂ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಈಕೆಯ ಹಾಡು ಹಾಗೂ ಡೈಲಾಗ್ ಆಗಾಗ ಗುನುಗಿಸುತ್ತಿರುತ್ವೆ.. ಅಷ್ಟೇ ಯಾಕೆ ಕಲ್ಪನಾ ಜೀವನಾಧರಿತ ಚಿತ್ರ ಅಭಿನೇತ್ರಿ ಕೂಡ ಬಂದು ಮತ್ತೊಮ್ಮೆ ಇಂತಹ ಅತ್ಯುತ್ತಮ ನಟಿಯನ್ನ ನೆನಪಿಸಿತ್ತು..
ಸಾಕು ಮಗಳು ಚಿತ್ರದ ಮೂಲಕ ಎಂಟ್ರಿ ಕೊಟ್ಟ ಕಲ್ಪನಾ ಸ್ಯಂಡಲ್ವುಡ್ನ ಹೆಮ್ಮೆಯ ಮಗಳಾದ್ರು.. ನಂತ್ರ ಈಕೆ ಅಭಿನಯಿಸಿದ್ದ ಬಹುತೇಕ ಚಿತ್ರಗಳು ಹಿಟ್ ಆದ್ವು.. ಅದ್ರಲ್ಲೂ ಶರಪಂಜರ ಸಿನಿಮಾದಲ್ಲಿ ಕಲ್ಪನಾ ನಟನೆಗೆ ಇಡೀ ಚಿತ್ರರಂಗವೇ ಮೂಕವಿಸ್ಮಿರಾಗಿದ್ದು ಸುಳ್ಳಲ್ಲ… ಕೇವಲ ಕನ್ನಡ ಮಾತ್ರವಲ್ಲದೇ ಮಲೆಯಾಳಂ, ತುಳು ಮತ್ತು ತೆಲುಗು ಚಿತ್ರಗಳಲ್ಲಿ ಕಲ್ಪನಾ ನಟಿಸಿದ್ದು ಎಂದು ಮರೆಯಲಾಗದ ಇತಿಹಾಸ..
ಗೊಡಗೇರಿ ಬಸವರಾಜು ನಾಟಕ ಕಂಪನಿಯಲ್ಲಿ ಅಭಿನಯಸಲು ಸಂಕೇಶ್ವರಕ್ಕೆ ಬಂದಿದ್ದ ಕಲ್ಪನಾ ಗೊಟುರು ಪ್ರವಾಸಿ ಮಂದಿರದಲ್ಲಿ ಉಳಿದುಕೊಂಡಿದ್ದರು.. ನಾಟಕದಲ್ಲಿ ತಪ್ಪು ಡೈಲಾಗ್ ಹೇಳಿದರೆಂದು ವೇದಿಕೆಯ ಮೇಲೆಯೆ ಗೋಡಗೇರಿ ಬಸವರಾಜು ಕಲ್ಪನಾಗೆ ಕಪಾಳ ಮೋಕ್ಷ ಮಾಡಿದ್ದರಿಂದ ಮನನೊಂದ ಕಲ್ಪನಾ ಗೋಟುರು ಪ್ರವಾಸಿ ಮಂದಿರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು ಅಂತ ಹೇಳಲಾಗಿತ್ತು..
ಸದ್ಯಕ್ಕೆ ಈ ನಟಿ ನಮ್ಮ ಚಿತ್ರರಂಗದ ಮಿನುಗಾತಾರೆಯಾಗೆ ಉಳಿದುಕೊಂಡಿದ್ದಾರೆ.. ಕ್ಯಾಮರಾ ಮುಂದೆ ನಿಂತರೇ ತನ್ನನೆ ತಾನು ಮರೆಯುವ ಹಾಗೆ ಅಭಿನಯಿಸ್ತಿದ್ದ ಕಲಾವಿದೆ ಕಲ್ಪನಾ ಅವ್ರು… ಇಂತಹ ಮಹಾ ಕಲಾವಿದೆ ಇಂದಿಗೆ ನಮ್ಮೊಂದಿಗೆ ಇದಿದ್ರೆ 75ರ ಹುಟ್ಟು ಹಬ್ಬದವನ್ನ ಆಚರಿಸಿಕೊಳ್ತಿದ್ರು..
ಮಿನ ಮಿನುಗುತ್ತಿರುವ ಮಿನುಗುತಾರೆ
Pingback: official website
Pingback: Rescue Tow University FL