‘ದಶ’ ದಿಕ್ಕುಗಳಲ್ಲ ‘ರಥ’ ಎಳೆದ ನಿರ್ಮಾಪಕನ ಕಚ್ಚೆಹರುಕತನ!

‘ದಶ’ ದಿಕ್ಕುಗಳಲ್ಲ ‘ರಥ’ ಎಳೆದ ನಿರ್ಮಾಪಕನ ಕಚ್ಚೆಹರುಕತನ!

ಕರೋನಾಗಿಂತ ಈ ಅ’ಸಮರ್ಥ’ ಡೇಂಜರ್!

ಕೊರೋನಾ ಇಡೀ ಜಗತ್ತನ್ನು ಬಾಧಿಸಿದರೂ, ನಮ್ಮಲ್ಲಿಯ ಗಾಂಧಿನಗರದ ಜೊಲ್ಲು ಪಾರ್ಟಿಗಳು ಎಗ್ಗಿಲ್ಲದೆ ತಮ್ಮ ಕಚ್ಚೆಹರುಕುತನವನ್ನು ಸಾಬೀತು ಪಡಿಸುತ್ತಿದ್ದಾರೆ. ಅದಕ್ಕೇ ಲೇಟೇಸ್ಟ್ ಸೇರ್ಪಡೆ ಅ’ಸಮರ್ಥ’ ನಿರ್ಮಾಪಕನೊಬ್ಬನ ಹೆಣ್ಣುಬಾಕತನದ ಈ ಸ್ಟೋರಿ. ಈ ಅ’ಸಮರ್ಥ’ (ಹೆಸರು ಅರ್ಥವಾಗುವವರಿಗೆ ಅರ್ಥ ಆಗುವಹಾಗೆ ಬದಲಾಯಿಸಲಾಗಿದೆ) ನಿರ್ಮಾಪಕ ಕನ್ನಡ ಸಿನಿಮಾರಂಗ ‘ಅಕ್ಷಯ’ ಪಾತ್ರೆ ಎಂದುಕೊಂಡು ಕಾಲಿಟ್ಟವನು, ಯಾವಾಗ ತನ್ನ ಚೊಚ್ಚಲ ಪ್ರಯತ್ನದಲ್ಲಿ, ‘ದಶ’ ದಿಕ್ಕಿನಲ್ಲಿ ರ್ರಾ ಬರ್ರಿ ‘ರಥ’ ಎಳೆದನೋ ಅವನ ಸಿನಿಮಾ ‘ಕ್ರೇಜ್’ಗೆ, ಸ್ಟಾರ್ ಪ್ರೋಡ್ಯೂಸರ್ ಆಗಬೇಕಿದ್ದವನ್ನು ಬ್ಲಾಕ್‌ಹೋಲ್ ಆಗಿಬಿಟ್ಟ.

ಈತನ ಚೊಚ್ಚಲ ನಿರ್ಮಾಣದ ಚಿತ್ರದಲ್ಲಿ ಒಂದಷ್ಟು ನಟಿಯರು ನೇರವಾಗಿ ಫೇಸ್‌ಬುಕ್ ಮೆಸೆಂಜರ್ ಮೂಲಕ ಆಯ್ಕೆಯಾಗಿದ್ದರು. ಸಂಜೆ ಮೂರಕ್ಕೆ ನಶೆ ಏರಿಸಿಕೊಳ್ಳುವ ಈತ ಫೇಸ್‌ಬುಕ್ ಹೊಕ್ಕು ಮೆಸೆಂಜರ್ ಮೂಲಕ ಹೊಕ್ಕುಳು ಹುಡುಕುವ ಕಚಡಾ ಕೆಲಸ ಆರಂಭಿಸುತ್ತಾನೆ. ಈತನ ಕಾಮುಕ ಕಣ್ಣಿಗೆ ಬಿದ್ದ ಹೆಣ್ಣು ಮೆಸೆಂಜರ್ ಬ್ಲಾಕ್ ಮಾಡಿದ್ದರೆ, ಈಡೀ ಇಂಡಸ್ಟಿಯಲ್ಲಿನ ತನ್ನ ಕಾಂಟೇಕ್ಟ್ ಜಾಲಾಡಿ, ಅಥವಾ ‘ಪ್ರಶಾಂತ’ ಮನಸ್ಸಿನ ಪಿಂಪ್‌ಗಳ ಮೂಲಕ ಆಕೆಯ ನಂಬರ್ ಕುದುರಿಸುತ್ತಾನೆ. ನಂಬರ್ ಸಿಕ್ಕಿದ್ದೇ ತಡ, ಸಿಕ್ಕಾಪಟ್ಟೆ ಫ್ರೋಫೆಶನಲ್ ಪ್ರೋಡ್ಯೂಸರ್ ಥರ.. ಒಂದೇ ಏಟಿಗೆ ಚಿತ್ರದ ಕಥೆಯನ್ನು ಆಕೆಯ ಪಾತ್ರವನ್ನೂ ವಿವರಿಸಿ ಬಿಡುತ್ತಾನೆ. ಒಬ್ಬ ಅನುಭವೀ ನಿರ್ದೇಶಕನನ್ನೂ ಮೀರಿಸುವ ರೀತಿಯಲ್ಲಿ ಕಥೆ, ಚಿತ್ರದಲ್ಲಿ ಆಕೆಯ ಪಾತ್ರವನ್ನು ಒಬ್ಬ ಅರೆಬೆಂದ ನಿರ್ಮಾಪಕನಾಗಿ ವಿವರಿಸುತ್ತಾನೆ. ನಂತರ,”ಪಾತ್ರ ಕಥೆ ಇಷ್ಟ ಆದ್ರೆ ನಿಮ್ಮ ಫೋಟೋ ಕಳ್ಸಿ… ಉಳಿದ ಕಮಿಟ್‌ಮೆಂಟ್‌ಗಳ ಬಗ್ಗೆ ಸಂಜೆ ಮಾತಾಡೋಣ’ ಎಂದು ಫೋನ್ ಇಡುತ್ತಾನೆ. ಅಷ್ಟರಲ್ಲಿ ಅವಾಕಾಶಕ್ಕಾಗಿ ಕಾದಿರುವ ಆಕೆಯ ಕಾಲು ನೆಲದಲ್ಲಿರುವುದಿಲ್ಲ.. ಅಷ್ಟು ಆತ ಪೂಸಿ ಹೊಡೆದಿರುತ್ತಾನೆ. ಎಲ್ಲಾ ಕನ್ನಡ ಸ್ಟಾರ್‌ಗಳ ಹೆಸರು ಹೇಳಿ.. ”ಅವರ ಕಾಲ್‌ಶೀಟ್ ಇಲ್ಲ ಅದ್ಕೆ, ಸದ್ಯಕ್ಕೆ ‘ಈ’ ಸ್ಟಾರ್ ಮಾಡ್ತಿದ್ದಾರೆ.. ಇದೊಂದು ಕಮರ್ಶಿಯಲ್ ಚಿತ್ರ.. ಕಮರ್ಶಿಯಲ್ ಚಿತ್ರ ಅಂದ್ರೆ ಗೊತ್ತಲ್ಲಾ..’’ ಎಂದು ನೇರವಾಗಿ ಹೇಳಿ ಸಿಕ್ಕಿಹಾಕಿಕೊಳ್ಳುವ ಭಯದಿಂದ ಆಕೆಗೆ ಅವನ ಕಚಡಾ ಮೈಂಡ್ ಅನ್ನು ಅರ್ಥ ಮಾಡಿಸುವ ಪ್ರಯತ್ನವನ್ನು ಮಾಡುತ್ತಾನೆ. ಇತ್ತ ಕಡೆ ಆಕೆ ಎಲ್ಲವನ್ನೂ ಸತ್ಯವೆಂದು ನಂಬಿಕೊಂಡು ಪೇಮೆಂಟ್ ಬಗ್ಗೆ ಕೇಳುತ್ತಾಳೆ.. ಆದರೆ ಆತ.. ‘ನಿಮ್ದು ಯಾವ ಏರಿಯಾ.. ನಿಮ್ಮ ಏರಾಯಾದಲ್ಲಿ ಅದು ಗೊತ್ತು.. ಇದು ಗೊತ್ತಾ.. ಸಿಕ್ತೀರಾ..’ ಎಂದು ನಶೆಯಲ್ಲಿ ತೊದಲುತ್ತಲೇ ಮಾತಾನಾಡುತ್ತಾನೆ. ಆಕೆ ಪೇಮೆಂಟ್ ಬಗ್ಗೆ ಒತ್ತು ಕೊಟ್ಟು ಮಾತನಾಡಿದಾರೆ.. ಟ್ರಾಕ್ ಬದಲಿಸಿ.. ಕನ್ನಡದ ನಂಬರ್-ಒನ್ ಸ್ಥಾನದ ಪೈಪೋಟಿಯಲ್ಲಿರುವ ನಟಿಯೊಬ್ಬಳ ಬಗ್ಗೆ ಬಹಳ ಕೀಳಾಗಿ ಮಾತಾನಾಡಿ. ತಾನು ಗಾಳ ಹಾಕುತ್ತಿರುವ ಮುಗ್ಧ ಹೆಣ್ಣುಮಗಳನ್ನು ಸುಖಾಸುಮ್ಮನೆ ಹೊಗಳುತ್ತಾ.. ಏಮಾರಿಸುವ ಎಲ್ಲಾ ತಂತ್ರಗಳನ್ನು ಪ್ರಯೋಗ ಮಾಡುತ್ತಾನೆ. ಇಷ್ಟಕ್ಕೇ ನಿಲ್ಲುವುದಿಲ್ಲ, ಈತ ಯಾವ ರೀತಿ ಹೆಣ್ಣು ಮಕ್ಕಳ ಬ್ರೆನ್‌ವಾಶ್ ಮಾಡ್ತಾನೆ? ಒಂದು ಹತ್ತಿಪ್ಪತ್ತು ಸಾವಿರ ಎಡ್ವಾನ್ಸ್ ಕೊಟ್ಟು ಚಿತ್ರದಲ್ಲಿ ಕ್ಯಾರೆಕ್ಟರ್ ಫೀಕ್ಸ್ ಮಾಡಿ, ಅವರ ಕ್ಯಾರೆಕ್ಟರ್‌ಗೇ ಕೊಳ್ಳಿ ಇಡುವ ಈ ಅ’ಸಮರ್ಥ’ನ ರಂಗಿನಾಟವನ್ನು ಮುಂದಿನ ಸಂಚಿಕೆಯಲ್ಲಿ ಒಂದೊಂದಾಗಿ ಸಾಕ್ಷಿ ಸಮೇತ ಬಿಚ್ಚಿಡ್ತೀವಿ. ಇವನ ಯೋಗ್ಯತೆಗೆ ಎರಡು ಮೂರು ಸಿಮ್ ಬೇರೆ ಕೇಡು. ಈತನ ವಾಟ್ಸ್ಪ್‌ನಲ್ಲಿ ಅಪ್ಪಿ ತಪ್ಪಿ ಕೂಡ ಇವನ ಮೂತಿ ಕಾಣೋದಿಲ್ಲ. ಸದ್ಯಕ್ಕೆ ‘ರಕ್ಷಿತಾ’ರಣ್ಯದಲ್ಲಿ ಬಚ್ಚಿಟ್ಟಿರುವ ಅಪರೂಪದ ‘ಪ್ರೇಮ್’ಯಾಣದ ಕಥೆಯನ್ನು ಒಬ್ಬ ಡೈರೆಕ್ಟರ್ ಕಮ್ ಅರೆಬೆಂದ ಹೀರೋ ಒಬ್ಬನಿಗೆ ಚಿತ್ರ ನಿರ್ಮಾಣ ಮಾಡ್ತಿದ್ದಾನಂತೆ. ಹೆಣ್ಣುಮಕ್ಕಳೆ ಎಚ್ಚರವಾಗಿರಿ.. ಮೆಸೆಂಜರ್ ಮೂಲಕ ನಿಮ್ಮ ಬ್ರೆನ್ ಹೊಕ್ಕುವ ಈತ ನಿಮ್ಮ ಬದುಕನ್ನು ಮುಗಿಸದೆ ಸುಮ್ಮನಾಗುವುದಿಲ್ಲ. ‘ಬಿಸಿನಿಮಾಸ್’ನ ಉದ್ದೇಶ ಇಷ್ಟೇ. ಈ ಅ’ಸಮರ್ಥ’ನಂತಹ ಲಜ್ಜೆಗೇಡಿ ನಿರ್ಮಾಪಕರಿಂದ ಇಡೀ ಇಂಡಸ್ಟ್ರಿಗೆ ಕೆಟ್ಟ ಹೆಸ್ರು ಬರಬಾರದು. ಸಿನಿಮಾ ಮೂಲಕವೇ, ತನ್ನ ಪ್ರತಿಭೆ ಮೂಲಕವೇ ಬದುಕು ಕಟ್ಟಿಕೊಳ್ಳುತ್ತೇನೆ ಎಂದು ಕನಸು ಹೊತ್ತು ಬರುವ ಹಣ್ಣು ಮಕ್ಕಳು ಈತನಿಗೆ ಬಲಿಯಾಗಬಾರದು.

ಮಿಸ್ಟರ್, ಅ’ಸಮರ್ಥ’ ನಿನ್ನ ಈ ನವರಂಗಿ ಆಟ ಇಲ್ಲಿಗೇ ನಿಲ್ಸಿದ್ರೇ ಸೇಫ್. ಇಲ್ಲ.. ಇನ್ನೂ ಇನ್ಯರಾದ್ದೋ ಮನೆಯ ಹೆಣ್ಣನ್ನು ಭೋಗದ ವಸ್ತು ಅನ್ನುವ ನಿನ್ನ ಬುದ್ಧಿ ಬದಲಾಗಿಲ್ಲವೆಂದರೆ… ಪೋನ್‌ನಲ್ಲಿ ರೆಕಾರ್ಡ್ ಆಗಿರೋ ನಿನ್ನ ನುಡಿಮುತ್ತುಗಳನ್ನು ಜಗಜ್ಜಾಹೀರು ಮಾಡೋದರಲ್ಲಿ ನೋ ಡೌಟ್.ಬೀ ಕೇರ್‌ಫುಲ್ ‘—-’ನೇ!

Be the first to comment

Leave a Reply

Your email address will not be published. Required fields are marked *

Translate »
error: Content is protected !!