ಪೂರ್ವಿಕಾಮೃತ ಕ್ರಿಯೇಷನ್ ಲಾಂಛನದಲ್ಲಿ ಹರಿಹರನ್ ಬಿ ಪಿ ನಿರ್ಮಾಣದ ಚಿತ್ರ ನಡುಗಲ್ಲು. ನಾಗರ ಹಾವು ಚಿತ್ರ ಎಂದರೆ ನೆನಪಾಗುವುದು, ಚಾಮಯ್ಯ ಮೇಷ್ಟçು ಹಾಗೂ ರಾಮಾಚಾರಿ ಶಿಷ್ಯ , ಗುರು, ಶಿಷ್ಯರ ಹೆಜ್ಜೆ ಹೆಜ್ಜೆಗು ಸವಾಲುಗಳ ಪ್ರತೀಕಾರ ನೆನಪಾಗುತ್ತದೆ. ಬಂಗಾರಿ, ಬೆಟ್ಟದ ದಾರಿ, ತಮಿಳಿನ ಕಾದಲ್ ಪೈತ್ಯಂ, ಶಿವನಪಾದ, ಚಿತ್ರಗಳನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಮಾ ಚಂದ್ರು ಅವರ ಮತ್ತೊಂದು ಚಿತ್ರ “ನಡುಗಲ್ಲು”.
ನಡುಗಲ್ಲು ಎಂಬ ಊರಿನಲ್ಲಿ, ಸರ್ಕಾರಿ ಶಾಲೆಯಲ್ಲಿ ಗುರು ಶಿಷ್ಯರ ನಡುವೆ ನಡೆಯುವ ಕ್ಷಣ ಕ್ಷಣಗಳಲ್ಲಿ ನಡೆಯುವ ಸವಾಲುಗಳನ್ನು ಗುರು ಶಿಷ್ಯರು ಹೇಗೆಲ್ಲಾ ಕಷ್ಟ ಸುಖಗಳನ್ನು ಎದುರಿಸುತ್ತಾರೆ , ಗುರು ಶಿಷ್ಯರ ಸವಾಲ್ ನಲ್ಲಿ ಯಾರು ಯಾರಿಗೆ ಸೋಲೊಪ್ಪುತ್ತಾರೆ ಎಂಬುದು ಚಿತ್ರ ಕಥಾ ಸಾರಾಂಶ. ಸಂಪೂರ್ಣ ಚಿತ್ರೀಕರಣ ೮೦℅ ರಷ್ಟು ಸರ್ಕಾರಿ ಶಾಲೆಯಲ್ಲಿ ಚಿತ್ರೀಕರಣ ನಡೆದಿದೆ. ಒಟ್ಟು ೨೪ ದಿನಗಳ ಕಾಲ ಕುಕ್ಕೆ ಸುಬ್ರಹ್ಮಣ್ಯ, ಸುಳ್ಯ ತಾಲ್ಲೂಕಿನ ನಡುಗಲ್ಲು ಗ್ರಾಮದಲ್ಲಿ ಸಂಪೂರ್ಣ ಚಿತ್ರೀಕರಣ ಮುಗಿಸಿದ ಚಿತ್ರ ತಂಡ,
ಈಗ ಡಬ್ಬಿಂಗ್ ಮುಗಿಸಿ, ಹಿನ್ನೆಲೆ ಸಂಗೀತ ಹಂತದಲ್ಲಿದೆ. ಮೇಷ್ಟçು ಪಾತ್ರದಲ್ಲಿ ಬಲ ರಾಜ್ ವಾಡಿ, ಶಿಷ್ಯನ ಪಾತ್ರವನ್ನು ನಿಶಾಂತ್ ಟಿ ರಾಠೋಠ್, ಹಾಗೂ ಮಂಜುಳಾ ರೆಡ್ಡಿ, ಹರಿಹರನ್, ಅಮೃತ, ಕಿಲ್ಲರ್ ವೆಂಕಟೇಶ್ ಹಾಗು ನೂರಕ್ಕೂ ಹೆಚ್ಚು ಮಕ್ಕಳು ಅಭಿನಯಿಸಿದಾರೆ. ಕಥೆ ,ಚಿತ್ರಕಥೆ,ಸಂಭಾಷಣೆ, ನಿರ್ದೇಶನ, ಮಾಚಂದ್ರು, ಛಾಯಾಗ್ರಹಣ:- ಜಾನ್ ಹಾಗೂ, ಸೂರ್ಯೋದಯ, ಸಂಗೀತ:- ಎ ಟಿ, ರವೀಶ್, ಸಂಕಲನ:- ಮತ್ತು ರಾಜ್ , ನಿರ್ಮಾಪಕ:- ಹರಿಹರನ್ ಬಿ ಪಿ, ನೃತ್ಯ ನಿರ್ದೇಶನ :- ಡಾಲಿ ರಮೇಶ್ ಅವರದ್ದು.
Pingback: Paket Wisata Bali
Pingback: alien sex doll for sale