ಇಂದ್ರಜಿತ್ ಲಂಕೇಶ್​​​ ನಿರ್ದೇಶನದ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ

ಸ್ಟಾರ್ ನಿರ್ದೇಶಕ, ಇಂದ್ರಜಿತ್ ಲಂಕೇಶ್ ಅವರು ಕೆಲವು ದಿನಗಳ ಹಿಂದೆ ಹಾಲಿವುಡ್​​​​​ ಸಿನಿಮಾ ಮಾಡುತ್ತಿರುವುದಾಗಿ ಹೇಳಿದ್ದರು.
ಇದಕ್ಕೆ ಸಂಬಂಧಿಸಿದಂತೆ ಅವರು ಮುಂಬೈ ಹಾಗೂ ವಿದೇಶಕ್ಕೆ ಕೂಡಾ ಹೋಗಿಬಂದಿದ್ದರು.

ಅವರು ನಿರ್ದೇಶಿಸಿರುವ ಮಲಯಾಳಂ ನಟಿ ಶಕೀಲಾ ಬಯೋಪಿಕ್​​ ಸಿನಿಮಾವನ್ನು ಒಟಿಟಿ ಪ್ಲಾಟ್​​​ಫಾರ್ಮ್​ನಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಈ ಸಿನಿಮಾ ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಾಗಿದೆ. ಬಾಲಿವುಡ್ ನಟಿ ರೀಚಾ ಚಡ್ಡಾ ‘ದಿ ಶಕೀಲಾ’ ಚಿತ್ರದಲ್ಲಿ ಶಕೀಲಾ ಪಾತ್ರ ನಿರ್ವಹಿಸಿದ್ದಾರೆ. ಪಂಕಜ್ ತ್ರಿಪಾಠಿ ಕೂಡಾ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.

ಇಂದ್ರಜಿತ್ ಲಂಕೇಶ್ ಅವರ ನಿರ್ದೇಶನದ ‘ಲವ್ ಯು ಆಲಿಯಾ’ ಚಿತ್ರದಲ್ಲಿ ಶಕೀಲಾ ಒಂದು ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಇಂದ್ರಜಿತ್ ವೃತ್ತಿ ಜೀವನದಲ್ಲಿ ‘ದಿ ಶಕೀಲಾ’ 10 ನೇ ಸಿನಿಮಾ. ಇದೀಗ ‘ದಿ ಶಕೀಲಾ’ ಚಿತ್ರವನ್ನು ನಿರ್ದೇಶಿಸಿರುವ ಇಂದ್ರಜಿತ್ ಸಿನಿಮಾ ಬಿಡುಗಡೆಗೆ ಮುಂದಾಗಿದ್ದಾರೆ. ಇದು ಮ್ಯೂಜಿಕ್ ಸಿನಿಮಾಸ್ ಬ್ಯಾನರ್ ಅಡಿ ತಯಾರಾದ ಸಿನಿಮಾ. ಒಟಿಟಿಯಲ್ಲಿ ಬಿಡುಗಡೆ ಮಾಡಿದರೆ ಸಿನಿಮಾ ಹೆಚ್ಚು ನೋಡುಗರನ್ನು ತಲುಪುವ ಸಾಧ್ಯತೆ ಇದೆ.

ಕನ್ನಡದ ‘ಭಿನ್ನ’ ಸಿನಿಮಾ ಈಗಾಗಲೇ ಒಟಿಟಿ ಪ್ಲಾಟ್​​ಫಾರ್ಮ್​ನಲ್ಲಿ ಬಿಡುಗಡೆ ಆಗಿದ್ದು 190 ದೇಶಗಳಲ್ಲಿ ವೀಕ್ಷಕರು ಏಕಕಾಲದಲ್ಲಿ ಸಿನಿಮಾ ನೋಡಿರುವುದು ತಿಳಿದ ವಿಚಾರ. ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಸಿನಿಮಾ ಬಿಡುಗಡೆಗೆ ಒಟಿಟಿ ಸೂಕ್ತ ಮಾರ್ಗ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

ಇನ್ನು ಜುಲೈ 17 ರಂದು ರಾತ್ರಿ 12 ಗಂಟೆಗೆ ಅಮೆಜಾನ್​ ಪ್ರೈಂನಲ್ಲಿ ಪಿಆರ್​ಕೆ ಪ್ರೊಡಕ್ಷನ್ಸ್ ಅಡಿ ತಯಾರಾದ ‘ಲಾ’ ಹಾಗೂ 24 ರಂದು ಪಿಆರ್​​ಕೆ ಅವರ ‘ಫ್ರೆಂಚ್ ಬಿರ್ಯಾನಿ’ ಕೂಡಾ ಬಿಡುಗಡೆಯಾಗುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!