ರಿಜಿಸ್ಟ್ರೇಷನ್ ಗೆ ರೆಡಿಯಾದ ಪೃಥ್ವಿ ಅಂಬರ್

ಸ್ಯಾಂಡಲ್​​ವುಡ್​​ನಲ್ಲಿ ‘ಫಾರ್ ರಿಜಿಸ್ಟ್ರೇಷನ್’ ಎಂಬ ಹೊಸ ಚಿತ್ರವೊಂದು ತಯಾರಾಗುತ್ತಿದೆ. ನವೀನ್ ದ್ವಾರಕನಾಥ್ ಎಂಬುವವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ.

ಬಹಳಷ್ಟು ಜನರು ತಾವು ಇಷ್ಟ ಪಡುವ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ರಿಜಿಸ್ಟರ್ ಮಾಡಿಕೊಳ್ಳಲು ಬಹಳ ಸರ್ಕಸ್ ಮಾಡುತ್ತಾರೆ. ಆದರೆ ಇಲ್ಲೊಂದು ತಂಡ ‘ಫಾರ್ ರಿಜಿಸ್ಟ್ರೇಷನ್’ ಎಂದು ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡುತ್ತಿದೆ.

ಕಿರುಚಿತ್ರಗಳನ್ನು ಮಾಡಿ ಅನುಭವ ಇರುವ ಸಾಫ್ಟ್​​ವೇರ್ ಉದ್ಯೋಗಿ ನವೀನ್ ದ್ವಾರಕನಾಥ್ ಎಂಬುವವರು ಸಿ.ಆರ್​. ಸಿಂಹ ಅವರೊಂದಿಗೆ ಕೂಡಾ ಕೆಲಸ ಮಾಡಿ ಅನುಭವ ಇರುವವರು. ಈಗ ಅವರು ‘ಫಾರ್ ರಿಜಿಸ್ಟ್ರೇಷನ್’ ಎಂಬ ಸಿನಿಮಾ ಮಾಡುತ್ತಿದ್ದಾರೆ. ಇದು ಸಾಂಸಾರಿಕ ಹಾಗೂ ಕಾಮಿಡಿ ಸಿನಿಮಾ ಎಂದು ನವೀನ್ ಹೇಳುತ್ತಾರೆ. ಚಿತ್ರಕ್ಕೆ ನವೀನ್ ಅವರೇ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಈ ಚಿತ್ರದಲ್ಲಿ ‘ದಿಯಾ’ ಖ್ಯಾತಿಯ ಚಿತ್ರದ ಪೃಥ್ವಿ ಅಂಬರ್, ತಬಲಾ ನಾಣಿ ಹಾಗೂ ಖ್ಯಾತ ತುಳು ನಟರೊಬ್ಬರು ನಟಿಸುತ್ತಿದ್ದಾರೆ. ಖ್ಯಾತ ನಿರ್ದೇಶಕ ಚೇತನ್ ಕುಮಾರ್ ಶೀರ್ಷಿಕೆ ಗೀತೆ ಬರೆದಿದ್ದಾರೆ. ನಿರ್ದೇಶಕ ನವೀನ್ ಸ್ನೇಹಿತ ನವೀನ್ ರಾವ್ ನಿಶ್ಚಲ್ ಈ ಚಿತ್ರಕ್ಕೆ ಹಣ ಹೂಡಲು ಮುಂದಾಗಿದ್ದಾರೆ. ಕಲಾವಿದರು, ತಂತ್ರಜ್ಞರ ಆಯ್ಕೆ ನಡೆಯುತ್ತಿದ್ದು ಕೆಲವೇ ದಿನಗಳಲ್ಲಿ ಸಿನಿಮಾ ಸೆಟ್ಟೇರಲಿದೆ.

This Article Has 3 Comments
  1. Pingback: replica watches

  2. Pingback: Login Area

  3. Pingback: click to find out more

Leave a Reply

Your email address will not be published. Required fields are marked *

Translate »
error: Content is protected !!