ಕಿಚ್ಚ ಸುದೀಪ್ ಅಭಿನಯದ ‘ಫ್ಯಾಂಟಮ್’ ಸಿನಿಮಾದ ಚಿತ್ರೀಕರಣ ಆರಂಭ

ರಂಗೀತರಂಗ ಖ್ಯಾತಿಯ ಅನೂಪ್ ಭಂಡಾರಿ ಅವರು ಫ್ಯಾಂಟಮ್ ಚಿತ್ರದ ಚಿತ್ರೀಕರಣವನ್ನು ಆರಂಭಿಸಲಿದ್ದಾರೆ ಎಂದು ಚಿತ್ರತಂಡವು ಹೇಳಿದೆ.

ಹೈದರಾಬಾದ್ ನ ಅನ್ನಪೂರ್ಣೇಶ್ವರಿ ಸ್ಟುಡಿಯೋದಲ್ಲಿ ಇದರ ಎರಡನೇ ಹಂತದ ಚಿತ್ರೀಕರಣವು ನಡೆಯಲಿದೆ. ಸಿನಿಮಾದಲ್ಲಿ ಕಿಚ್ಚ ಸುದೀಪ್ ನಾಯಕ ನಟನಾಗಿ ನಟಿಸಲಿರುವರು.

ಈಗಾಗಲೇ ಚಿತ್ರದ ಶೇ.35ರಷ್ಟು ಚಿತ್ರೀಕರಣವು ಮಹಾರಾಷ್ಟ್ರದ ಮಹಾಬಲೇಶ್ವರ ಮತ್ತು ಬೆಂಗಳೂರಿನಲ್ಲಿ ಪೂರ್ಣಗೊಂಡಿದೆ. ಇನ್ನೂ 70-80 ದಿನಗಳ ಚಿತ್ರೀಕರಣವು ಬಾಕಿ ಉಳಿದಿದೆ ಎಂಧು ಚಿತ್ರ ತಂಡವು ತಿಳಿಸಿದೆ.

ಅನುಪ್ ಸೋದರ ನಿರುಪ್ ಅವರು ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಟಿಯಾದ ಶ್ರದ್ಧಾ ಶ್ರೀನಾಥ್ ನಟಿಸುತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!