ಚಿರಂಜೀವಿ ಸರ್ಜಾರ ಅಂತಿಮ ದರ್ಶನ ಪಡೆದ ನವರಸ ನಾಯಕ ಜಗ್ಗೇಶ್, ಚಿರು ಸಾವಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಸಾವು ನ್ಯಾಯವೇ ಎಂದು ದೇವರಿಗೆ ಪ್ರಶ್ನೆ ಹಾಕಿದ್ದಾರೆ
ಅಂತಿಮ ದರ್ಶನ ಪಡೆದು ನಂತರ ಮಾಧ್ಯಮದವರ ಜೊತೆ ಮಾತನಾಡಿದ ಜಗ್ಗೇಶ್, ಚಿರು ಸಾವಿನ ವಿಚಾರವನ್ನು ಕೇಳಿದ ತಕ್ಷಣ ಇಲ್ಲಿಗೆ ಆಗಮಿಸಿದೆ. ಈ ಸುದ್ದಿಯನ್ನು ನನ್ನ ಡ್ರೈವರ್ ತಿಳಿಸಿರುವುದಾಗಿಯೂ ಹೇಳಿದರು. ಇದೇ ವೇಳೆ ಮೇಘನಾ ಮತ್ತು ಜಿರು ಮದುವೆ ಬಗ್ಗೆ ಮಾತನಾಡಿದ ಜಗ್ಗೇಶ್, ಮೇಘನಾರನ್ನು ತುಂಬಾ ಇಷ್ಟ ಪಡುತ್ತಿದ್ದ. ನಾನೇ ಈ ಇಬ್ಬರ ಕುಟುಂಬಗಳನ್ನು ಒಪ್ಪಿಸಿದೆ. ಅಂದು ಇವರ ಮದುವೆ ಮಾಡಿಸಿ ಇಂದು ಚಿರು ಆತ್ಮಕ್ಕೆ ಶಾಂತಿ ಕೋರಲು ಹಿಂಜರಿಕೆಯಾಗುತ್ತಿದೆ ಎಂದರು.
ಚಿರಂಜೀವಿ ಸರ್ಜಾ ಸಾವಿನ ಬಗ್ಗೆ ಟ್ವೀಟ್ ಮಾಡಿರುವ ನಟ ಜಗ್ಗೇಶ್, ನಂಬಲಾಗುತ್ತಿಲ್ಲಾ.. ಹೇಳಲಾಗದ ನೋವು.. ಏನಾಗುತ್ತಿದೆ ನನ್ನ ಚಿತ್ರರಂಗಕ್ಕೆ.. ಅನ್ಯರ ಸಂತೋಷಕ್ಕೆ ನಟಿಸಿ ಬದುಕುವ ಜನ್ಮ ಕಲಾಬದುಕು.. ಯಾವ ತಪ್ಪಿಗೆ ಈ ಶಿಕ್ಷೆ..! ನಿನ್ನ ಆತ್ಮಕ್ಕೆ ಶಾಂತಿ ಕೋರಲು ಒಪ್ಪುತ್ತಿಲ್ಲಾ ನನ್ನಮನಸ್ಸು.. ದೇವರೆ ಈ ಸಾವು ನ್ಯಾಯವೆ! ಎಂದು ಬರೆದಿದ್ದಾರೆ.
https://www.facebook.com/iamjaggesh/photos/a.165948963591465/1407454992774183/?type=3
Be the first to comment