ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್ ಅವರ ಧ್ವನಿಯಲ್ಲಿ ಹಿಂದಿ ಹಾಡು!

ಕನ್ನಡದಲ್ಲಿ ‘ಫಸ್ಟ್ ರ್ಯಾಂಕ್ ರಾಜು’ಹಾಗು ಕೃಷ್ಣ ತುಳಸಿ ಖ್ಯಾತಿಯ ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್  ಅವರು ಈ ಲಾಕ್‌ಡೌನ್  ಸಂದರ್ಭದಲ್ಲಿ ಸದಾ ಹೊಸ ರಾಗ, ಹೊಸ ಚಿಂತನೆಯಲ್ಲಿ ತೊಡಗಿ ಈಗ ಒಂದು ಹೊಸ ಹೆಜ್ಜೆ ಇಟ್ಟಿದ್ದಾರೆ. ಈ ಲಾಕ್‌ಡೌನ್ ಸಂದರ್ಭದಲ್ಲಿ ಒಂದು ಹಿಂದಿ ಭಾಷೆಯ ಗೀತೆಯನ್ನು ಸ್ವತಃ ಹಾಡಿದ್ದಾರೆ ಹಾಗೂ ರಾಗ ಸಂಯೋಜನೆ ಸಹ ಮಾಡಿದ್ದಾರೆ.

‘ಫಸ್ಟ್ ರ್ಯಾಂಕ್ ರಾಜು ಸಿನಿಮಾದಲ್ಲಿ ಎಲ್ಲ ಹಾಡುಗಳಿಗೆ ಮಾಧುರ್ಯ ತುಂಬಿಕೊಟ್ಟಿದ್ದ ಕಿರಣ್ ರವೀಂದ್ರನಾಥ್ ಅವರು ಎಲ್ಲ ಹಾಡುಗಳಿಗೆ ಅಧ್ಬುತ ಸಂಗೀತ ನೀಡಿ ಜೈ ಅನಿಸಿಕೊಂಡಿದ್ದರು. ಆದರೆ ಈಗ ಒಂದು ಹಿಂದಿ ಹಾಡನ್ನೂ ಹಾಡಿ ರಾಗ ಸಂಯೋಜನೆ ಮಾಡಿದ್ದಾರೆ. ಅದರ ಲಿಂಕ್ ಇಲ್ಲಿದೆ. ನೀವು ಕೇಳಿ ಹಾರೈಯಿಸಿ.

 

‘ಚಹಾ ಥಾ ಕ್ಯಾ ಹಮ್ ನೇ’ ಹಾಡಿಗೆ ಎಲ್ಲ ವಾದ್ಯಗಳನ್ನು ಕಿರಣ್ ರವೀಂದ್ರನಾಥ್ ನುಡಿಸಿದ್ದಾರೆ ಮತ್ತು ಅವರ ಧ್ವನಿಯಲ್ಲಿ ಕೆ ಆರ್ ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡಿದ್ದಾರೆ.

ಇವರ ಸ್ನೇಹಿತ ಗಿಟಾರ್ ವಾದ್ಯಗಾರ ಹಾಗೂ ಸಿವಿಲ್ ಇಂಜಿನಿಯರ್ ಆಗಿರುವ ಹಮೀದ್ ಹಾಸನ್, ಈ ಹಿಂದಿ ಹಾಡನ್ನು ರಚಿಸಿದ್ದಾರೆ. ಈ ಹಾಡು ಕೆಲವು ದಿನಗಳ ಹಿಂದೆಯಷ್ಟೇ ಯುಟ್ಯೂಬ್​ನಲ್ಲಿ ಬಿಡುಗಡೆ ಆಗಿದೆ.

3 ನಿಮಿಷ 25 ಸೆಕಂಡ್ ಅವಧಿಯ ಈ ವಿಡಿಯೋ ಹಾಡನ್ನು ರೆಕಾರ್ಡ್ ಮಾಡಿ ಕಿಬೋರ್ಡ್, ರಿದಮ್ ಪ್ರೋಗ್ರಾಮ್ ಸಹ ಕಿರಣ್ ರವೀಂದ್ರನಾಥ್ ಮಾಡಿದ್ದಾರೆ. ವರುಣ್ ಪ್ರದೀಪ್ ಮಾಸ್ಟರಿಂಗ್ ಮಾಡಿ, ಗಣೇಶ್ ಈ ಹಾಡಿಗೆ ಛಾಯಾಗ್ರಹಣ ಮಾಡಿದ್ದಾರೆ.

ಕೋರೊನಾ ವೈರಸ್ ಹಿನ್ನೆಲೆ ಲಾಕ್‌ಡೌನ್ ಆದ ಸಮಯದಲ್ಲಿ ಸಂಗೀತ ಅಭ್ಯಾಸ, ರಾಗಗಳ ಬ್ಯಾಂಕ್ ಸಹ ಸಿದ್ದ ಮಾಡಿಕೊಂಡಿರುವ ಕಿರಣ್ ರವೀಂದ್ರನಾಥ್ ಸಂಕಲನದ ಬಗ್ಗೆ ಸಹ ತಿಳುವಳಿಕೆ ಬೆಳೆಸಿಕೊಂಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!