ಕಿರಿಕ್’ ನಟಿಗೆ ಈದು ಬೇಕಿತ್ತಾ? ಹೆಣ್ಮಕ್ಕಳ ಸ್ವಾಭಿಮಾನಕ್ಕೆ ‘ಕರಾಬು’ ಕೊಳ್ಳಿ!
‘ಕಿರಿಕ್’ನಟಿ ರಶ್ಮಿಕಾ ಕನ್ನಡೇತರ ಚಿತ್ರಗಳಲ್ಲಿ ಬ್ಯೂಸಿಯಾಗಿರುವುದರ ಮಧ್ಯೆಯೇ, ‘ಪೊಗರು’ನಲ್ಲಿ ನಟಿಸಿ ಹೋಗಿದ್ದಾರೆ. ಇತ್ತೀಚಿಗೆ ಈ ಚಿತ್ರದ ‘ಕರಾಬು’ ಸಾಂಗ್ ರಿಲೀಸ್ ಆಗಿ ‘ರಶ್ಮಿಕಾಗೆ ಈ ಚಿತ್ರದಲ್ಲಿ ನಟಿಸುವ ದರ್ದು ಏನಿತ್ತು?’ ಎಂದು ಆಕೆಯ ಅಭಿಮಾನಿಗಳು ಕೇಳುವಂತಾಗಿದೆ. ಕಾರಣ ಹಾಡಿನಂತೆಯೇ ಚಿತ್ರದ ದೃಶ್ಯಗಳೂ ಕರಾಬಾಗಿದೆ. ಹೌದು, ಈ ಚಿತ್ರವನ್ನು ನಿರ್ದೇಶಕ ನಂದ ಕಿಶೋರ್ ನಿರ್ದೇಶಿಸಿದ್ದು, ನಾಯಕನಾಗಿ ಧ್ರುವ ಸರ್ಜಾ ನಟಿಸಿದ್ದಾರೆ. ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಆದರೀಗ ಪೊಗರು ಚಿತ್ರದಲ್ಲಿನ ಈ ಸಾಂಗ್ ಕಾಂಟ್ರವರ್ಸಿಯಾಗಿದೆ.
ಸಾಂಗ್ ಲಿಂಕ್ 👇
ಹಾಡಿನಲ್ಲಿ, ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆ ಬರುವಂತಹ ನೃತ್ಯ ನಿರ್ದೇಶನ ಮಾಡಲಾಗಿದೆ. ಡ್ಯಾನ್ಸ್ ಮಾಸ್ಟರ್ ಹರ್ಷ, ಹಾಡನ್ನು ಕರಾಬಾಗಿ ಚಿತ್ರಿಸಲು ಹೋಗಿ ರಶ್ಮಿಕಾರನ್ನು ಒಂದು ಆಟದ ಬೊಂಬೆಯಂತೆ ಬಳಸಿಕೊಂಡಿದ್ದಾರೆ. ನೀವು ಹಾಡು ನೋಡಿದರೆ ನಿಮಗೆ ಅರ್ಥವಾಗುತ್ತದೆ. ಮಾಂಸ ಪರ್ವತದಂತಿರುವ ಧ್ರುವ ಕಾಲಿನಲ್ಲಿ ತನ್ನಡೆಗೆ ಎಳೆದುಕೊಳ್ಳುವುದು.. ರಶ್ಮಿಕಾರನ್ನೇ ಡಂಬಲ್ಲಸ್ ಥರ ಯೂಸ್ ಮಾಡೋದು.. ಇಡೀ ಹಾಡಿನಲ್ಲಿ ರಶ್ಮಿಕಾರನ್ನು ಕಡೆಗೆಣಿಸಿ ಕೇವಲ ಮಾಂಸಪರ್ವತವನ್ನು ಹೈಲೈಟ್ ಮಾಡಿದ್ದು.. ಈ ಥರ ಸಾಕಷ್ಟು ನಾನ್ಸೆನ್ಸ್ ಸ್ಟೆಪ್ಗಳನ್ನು ಹರ್ಷ ಮಾಸ್ಟರ್ ಹಾಕಿಸಿದ್ದಾರೆ.ಒಂದು ರೀತಿಯಲ್ಲಿ, ಈ ಹಾಡಿನಲ್ಲಿ ನಾಯಕ ಧ್ರುವ ಸರ್ಜಾ ಅವರು ನಾಯಕಿ ರಶ್ಮಿಕಾ ಅವರಿಗೆ ಕಿರುಕುಳ ನೀಡುವುದನ್ನು ನೋಡಿದರೆ, ಚಿತ್ರದಲ್ಲಿ ನಿರ್ದೇಶಕ ನಂದಕಿಶೋರ್, ಹೆಣ್ಣುಮಕ್ಕಳನ್ನು ಪರದೆಯ ಮೇಲೆ ಇನ್ನೆಷ್ಟು ಕೆಟ್ಟದಾಗಿ ಟ್ರೀಟ್ ಮಾಡಿರಬಹುದು ಎಂದು ಊಹಿಸಿಒಂಡೇ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಹಾಡಿನ ದೃಶ್ಯಗಳಲ್ಲಿ ಹೆಚ್ಚಾಗಿ ದ್ರುವ ದುರಹಂಕಾರ ಮತ್ತು ಹಿಂಸಾತ್ಮಕ ಪ್ರವೃತ್ತಿ ಕಾಣಿಸುತ್ತದೆ ಎಂದು ನೋಡುಗರು ಆಕ್ಷೇಪಣೆ ಮಾಡಿದ್ದರಲ್ಲಿ ತಪ್ಪಿಲ್ಲ ಬಿಡಿ. ಯಾಕೆಂದರೆ, ಈಗಾಗಲೇ ಸಮಾಜದಲ್ಲಿ ಮಹಿಳೆಯರ ಮೇಲೆ ಗಂಭೀರ ದಾಳಿಗಳು ನಡೆಯುತ್ತಿವೆ. ಈ ಸನ್ನಿವೇಶದಲ್ಲಿ, ನಾಯಕನ ಅತಿಯಾದ ಹಿಂಸೆ, ಕಿರುಕುಳ ನಮಗೆ ತುಂಬಾ ಕೋಪ ತಂದಿದೆ ಎಂದು ಮಹಿಳಾ ನೆಟ್ಟಿಗರು ಕಿಡಿಕಾರಿದ್ದಾರೆ.
ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈಗಾಗಲೇ ಮೂರು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿ, ಹ್ಯಾಟ್ರಿಕ್ ಸ್ಥಾನ ಪಡೆದಿದ್ದಾರೆ. ಆದ್ದರಿಂದ ಪೊಗರು ಚಿತ್ರದ ಮೇಲೆ ಧ್ರುವ ಅಭಿಮಾನಿಗಳ ನಿರೀಕ್ಷೆ ತುಸು ಹೆಚ್ಚಾಗಿದೆ. ಹಾಗೆಂದು ಯೂತ್ ಕನೆಕ್ಟ್ ಆಗಬೇಕೆಂದು ನಂದ&ಹರ್ಷ ಸೇರಿ ರಶ್ಮಿಕಾರನ್ನು ಈ ರೀತಿ ಚಿತ್ರಿಸಿದ್ದು ಎಷ್ಟು ಸರಿ. ”ಸಿನಿಮಾ ನೋಡಿ ಎಲ್ಲಾ ಅರ್ಥ ಅಗುತ್ತೆ, ಅದು ನಾಯಕನ ಪಾತ್ರ..’’ ಎಂದು ನಂದ ಎಸ್ಕೇಪ್ ಆಗಬಹುದು. ಆದರೆ, ಜನಪ್ರಿಯತೆಗಾಗಿ, ಹಾಡನ್ನು ವೈರಲ್ ಮಾಡುವ ಉದ್ದೇಶದಿಂದ ಈ ರೀತಿ ಮಾಡಿರೋದು ಎಷ್ಟು ಸಮಂಜಸ ಅನ್ನೋದನ್ನು ನಂದ&ಟೀಮ್ ಆದಷ್ಟು ಬೇಗ ಕನ್ನಡಿಗರಿಗೆ ಹೇಳಬೇಕು.
@ಬಿಸಿನಿಮಾಸ್ ಡಾಟ್ ಇನ್

Be the first to comment