ಈಡೇರಲಿಲ್ಲ ಬುಲೆಟ್​ ಪ್ರಕಾಶ್​ ಕೊನೆಯಾಸೆ!

ಬೆಂಗಳೂರು: ಕನ್ನಡದ ಖ್ಯಾತ ಹಾಸ್ಯನಟ ಬುಲೆಟ್​ ಪ್ರಕಾಶ್ ತಮ್ಮ 44ನೇ ವಯಸ್ಸಿನಲ್ಲಿ ಇವತ್ತು ಕೊನೆಯುಸಿರೆಳೆದಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ಹಾಸ್ಯನಟರಾಗಿ ಗುರುತಿಸಿಕೊಂಡಿದ್ದ ಇವರು ಸರಿಸುಮಾರು 325ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದರು.

ಸ್ಯಾಂಡಲ್​ವುಡ್​ನಲ್ಲಿ ದರ್ಶನ್ ಜೊತೆ ಉತ್ತಮವಾಗಿ ಒಡನಾಟ ಹೊಂದಿದ್ದ ಈ ನಟ ಕಳೆದ ಕೆಲ ವರ್ಷಗಳಿಂದ ಅವಕಾಶಕ್ಕಾಗಿ ಕಾಯುತ್ತಿದ್ದರು. ಇದೇ ವೇಳೆ ತಮ್ಮ ದೇಹದ ತೂಕ ಇಳಿಸಿಕೊಳ್ಳುವ ಕೆಲಸವನ್ನೂ ಅವರು ಮಾಡಿದ್ದರು. ತಾನು​ ಕೊನೆಯುಸಿರೆಳೆಯುವುದಕ್ಕೂ ಮುನ್ನ ದರ್ಶನ್ ಜೊತೆ ಮತ್ತೊಮ್ಮೆ ನಟಿಸಬೇಕು ಎಂಬ ಆಸೆಯನ್ನು ಅವರೊಮ್ಮೆ ಹೇಳಿಕೊಂಡಿದ್ದರು. ಆದರೆ ಈ ಕನಸು ಕೊನೆಗೂ ನನಸಾಗಲಿಲ್ಲ.

ಬುಲೆಟ್​ ಪ್ರಕಾಶ್ ಹಾಗು​ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಉತ್ತಮ ಗೆಳೆಯರಾಗಿದ್ದರು. ಡಿಬಾಸ್ ಜೊತೆ ಉತ್ತಮ ಒಡನಾಟ ಹೊಂದಿದ್ದ ಪ್ರಕಾಶ್,​ ‘ಭಗವಾನ್​’, ‘ಧ್ರುವ’, ‘ಬಾಸ್​’, ‘ಶೌರ್ಯ’, ‘ಐರಾವತ’, ‘ಕಲಾಸಿಪಾಳ್ಯ’, ‘ದತ್ತ’, ‘ನಿನಗೋಸ್ಕರ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು.

1999ರಲ್ಲಿ ತೆರೆಕಂಡ ನಿರ್ಮಾಪಕ ರಾಮು ಅವರ ‘ಎಕೆ 47’ ಸಿನಿಮಾದ ಮೂಲಕ ಫುಲ್​ ಟೈಮ್​ ನಟನಾಗಿ ಪ್ರಕಾಶ್​ ಎಂಟ್ರಿಯಾಗಿತ್ತು. ಓಂ ಪ್ರಕಾಶ್​ ರಾವ್ ನಿರ್ದೇಶನದ ಈ ಸಿನಿಮಾದಲ್ಲಿ ಶಿವರಾಜ್​ಕುಮಾರ್​ ಅವರ ಎದುರು ಪ್ರಕಾಶ್​ ನಟಿಸಿದ್ದರು. ಇನ್ನು ಸುದೀಪ್​ ಜತೆ ‘ಪಾರ್ಥ’, ‘ಹುಚ್ಚ’, ‘ಬಚ್ಚನ್’​, ‘ಮಸ್ತ್​ ಮಜಾ ಮಾಡಿ’, ‘ನಲ್ಲ’ ಸೇರಿದಂತೆ ಹಲವಾರು ಚಿತ್ರಗಳಲ್ಲೂ ಮನೋಜ್ಞ ಅಭಿನಯ ನೀಡಿ ಪ್ರೇಕ್ಷಕರ ಚಪ್ಪಾಳೆಗಿಟ್ಟಿಸಿಕೊಂಡಿದ್ದರು. ರವಿಚಂದ್ರನ್​ ಅವರೊಂದಿಗೆ 9 ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು.

ಇನ್ನು ‘ಪ್ರೀತ್ಸು ತಪ್ಪೇನಿಲ್ಲ’, ‘ಜಾಕಿ’, ‘ರಾಟೆ’, ‘ಏಕಾಂಗಿ’, ‘ಪುಂಗಿದಾಸ’, ‘ಅಹಂ ಪ್ರೇಮಾಸ್ಮಿ’, ‘ಸಾಹೇಬ’ ಹೀಗೆ 325ಕ್ಕೂ ಹೆಚ್ಚು ಸಿನಿಮಾಗಳಲ್ಲಿ ರಂಜಿಸಿದ ಬುಲೆಟ್ ಪ್ರಕಾಶ್‌ ಅವರನ್ನು ಕನ್ನಡ ಚಿತ್ರಲೋಕ ಕಳೆದುಕೊಂಡಿದೆ.

This Article Has 2 Comments
  1. Pingback: Auto Glass Replacement Williamsburg VA

  2. Pingback: plumber Tarboro

Leave a Reply

Your email address will not be published. Required fields are marked *

Translate »
error: Content is protected !!