ಸದ್ಯದಲ್ಲೇ ಜಗ್ಗಿ ಜಗನ್ನಾಥ್

ಶ್ರೀ ಮೈಲಾರ ಲಿಂಗೇಶ್ವರ ಮೂವಿ ಲಾಂಛನದಲ್ಲಿ ಹೆಚ್. ಜಯರಾಜು, ಜಿ ಶಾರದಾ ನಿರ್ಮಿಸುತ್ತಿರುವ ಜಗ್ಗಿ ಜಗನ್ನಾಥ್ ಚಿತ್ರಕ್ಕೆ ಈಗಾಗಲೇ ಯು/ಎ ಸರ್ಟಿಫಿಕೇಟ್ ದೊರೆತಿದೆ. ವಿಶೇಷವಾಗಿ ಈ ಚಿತ್ರದ ಮೂರು ಹಾಡುಗಳನ್ನು ರಾಜಸ್ಥಾನದ ಸುಂದರ ಲೊಕೇಷನ್ನುಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಚಿತ್ರ ಲವ್ ಆ್ಯಕ್ಷನ್ ಮತ್ತು ಅಂಡ್‌ವರ್ಲ್ಡ್ ಕತೆಯನ್ನು ಹೊಂದಿದೆ. ಚಿತ್ರವನ್ನು ಸದ್ಯದಲ್ಲೇ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

ಓಂ ಸಾಯಿ ಪ್ರಕಾಶ್ ನಿರ್ದೇಶಿಸಿರುವ ಈ ಚಿತ್ರಕ್ಕೆ ಎ.ಎಂ. ನೀಲ್ ಸಂಗೀತ, ರೇಣುಕುಮಾರ್ ಛಾಯಾಗ್ರಹಣ, ಯೋಗರಾಜ ಭಟ್, ಜಯಂತ್ ಕಾಯ್ಕಿಣಿ, ವಿಜಯ್ ವಿ ಸಾಹಿತ್ಯ, ಶ್ರೀನಿವಾಸ್ ಬಿ ಬಾಬು ಸಂಕಲನ, ಅರವಿಂದ್ ಡಿಸ್ಕೋ ಸಿಲ್ವ ನೃತ್ಯ ನಿರ್ದೇಶನ, ಜಗ್ಗಿ ಮಾಸ್ಟರ್ ಹಾಗೂ ಕೌರವ ವೆಂಕಟೇಶ್ ಸಾಹಸವಿದೆ. ಲಿಖಿತ್ ರಾಜ್, ದುನಿಯಾ ರಶ್ಮಿ, ಸಾಯಿಕುಮಾರ್, ತಬಲಾ ನಾಣಿ, ಪದ್ಮಜಾ ರಾವ್, ಲಯೇಂದ್ರ ಕೋಕಿಲ, ಮೈಕೋ ನಾಗರಾಜ್, ಪೆಟ್ರೋಲ್ ಪ್ರಸನ್ನ, ಕಡ್ಡಿಪುಡಿ ಚಂದ್ರು, ಮುನಿ ದಂಡುಪಾಳ್ಯ, ಪವನ್, ಮೋಹನ್ ಜುನೇಜ, ವಾಣಿಶ್ರೀ, ಗುರುರಾಜ ಹೊಸಕೋಟೆ ಮುಂತಾದವರ ತಾರಾಬಳಗವಿದೆ.

This Article Has 1 Comment
  1. Pingback: ebook cpns 2022 pdf

Leave a Reply

Your email address will not be published. Required fields are marked *

Translate »
error: Content is protected !!