೧೦೦ ಕಂತುಗಳನ್ನ ಯಶಸ್ವಿಯಾಗಿ ಪೂರೈಸಿದ ಜೊತೆ ಜೊತೆಯಲಿ ಧಾರಾವಾಹಿ

ನಂ.೧ ಕನ್ನಡ ಸಾಮಾನ್ಯ ಮನರಂಜನಾ ವಾಹಿನಿ, ಜೀ಼ ಕನ್ನಡ ತನ್ನ ಜನಪ್ರಿಯ ಫಿಕ್ಷನ್ ಹಾಗೂ ನಾನ್-ಫಿಕ್ಷನ್ ಕಾರ್ಯಕ್ರಮಗಳಿಂದ ವೀಕ್ಷಕರ ಮನ ಗೆದ್ದಿದೆ. ಈ ಚಾನೆಲ್ನ ಅತ್ಯಂತ ಜನಪ್ರಿಯ ಜೋಡಿ, ಜೊತೆ ಜೊತೆಯಲಿ ಮತ್ತು ತಂಡ ಜನವರಿ ೨೩ರಂದು ೧೦೦ ಕಂತುಗಳ ಪೂರೈಸಿದ್ದರ ಸಂಭ್ರಮಾಚರಣೆ ಮಾಡಿತು. ವಿವಿಧ ತಲೆಮಾರುಗಳಿಗೆ ಸೇರಿದ ದಂಪತಿಗಳ ಅಸಾಂಪ್ರದಾಯಿಕ ಪ್ರೇಮಕಥೆಯನ್ನು ಆಧರಿಸಿರುವ ಈ ಧಾರಾವಾಹಿ ಪ್ರಾರಂಭ ಎಲ್ಲ ದಾಖಲೆಗಳನ್ನೂ ಮುರಿದು ಕನ್ನಡ ಕಿರುತೆರೆ ಉದ್ಯಮದ ಧಾರಾವಾಹಿಗಳಲ್ಲಿ ಮುಂಚೂಣಿಗೆ ಬಂದಿತು.

ಇಂದು, ಜೊತೆ ಜೊತೆಯಲಿ ೨೦೨೦ರ ೧ನೇ ವಾರದಲ್ಲಿ ೧೪.೭ ಟಿ.ವಿ.ಆರ್ ಪಡೆದಿದೆ.
ಜೊತೆ ಜೊತೆಯಲಿ ತಂಡವು ಈ ಸಂಭ್ರಮವನ್ನು ‘ಜೊತೆ ‘ಜೊತೆಯಲಿ’ ಲಾಂಛನ ಹೊಂದಿದ ಕೇಕ್ ಅನ್ನು ಧಾರಾವಾಹಿಯ ಸೆಟ್ನಲ್ಲಿ ಕತ್ತರಿಸುವ ಮೂಲಕ ಸಂಭ್ರಮಿಸಿತು. ಹೆಚ್ಚುವರಿಯಾಗಿ, ಈ ಕಾರ್ಯಕ್ರಮದ ನಿರ್ಮಾಪಕರು ಈ ಯಶಸ್ಸಿಗೆ ಅದರ ವಿನೂತನ ಕಥೆಯನ್ನು ನಿರ್ಧರಿಸಿದ್ದು ಕಾರಣವಾಗಿದ್ದು ಇದರಲ್ಲಿ ನಾಯಕ ಆರ್ಯ ವರ್ಧನ್ ನಾಯಕಿ ಅನು ಸಿರಿಮನೆಗೆ ಆಕೆ ನಿದ್ರೆಯಲ್ಲಿದ್ದಾಳೆ ಎಂದು ತಿಳಿದು ತನ್ನ ಪ್ರೀತಿಯನ್ನು ನಿವೇದಿಸುತ್ತಾನೆ.

ಈ ಮಧ್ಯದಲ್ಲಿ, ಆರ್ಯನ ಕಛೇರಿಯಲ್ಲಿ ಅನುವಿಗೆ ಪರಿಪೂರ್ಣ ಜೋಡಿಯಾದ ನೀಲ್ ಪ್ರವೇಶಿಸುವುದನ್ನು ಕಾಣುತ್ತಾರೆ. ಆರ್ಯನ ಪರ್ಸನಲ್ ಅಸಿಸ್ಟೆಂಟ್ ಮೀರಾ ಹೆಗ್ಡೆ ಆರ್ಯ ಮತ್ತು ಅನು ವಿರುದ್ಧ ಸಂಚು ರೂಪಿಸಲು ಯತ್ನಿಸುತ್ತಾಳೆ, ಈ ಧಾರಾವಾಹಿಯಲ್ಲಿ ಅವರು ಈ ಎಲ್ಲ ಅಡೆತಡೆಗಳ ವಿರುದ್ಧ ಹೋರಾಟ ನಡೆಸಿ ತಮ್ಮ ಪರಸ್ಪರ ಪ್ರೀತಿಯನ್ನು ಉಳಿಸಿಕೊಳ್ಳುತ್ತಾರೋ ಎಂದು ಇನ್ನೂ ನಿರ್ಧರಿಸಬೇಕಾಗಿದೆ.
ಜೊತೆ ಜೊತೆಯಲಿ ಮುಂದಿನ ಹೆಜ್ಜೆಗಳನ್ನು ಪ್ರತಿ ದಿನ ಸಂಜೆ ೬.೩೦ಕ್ಕೆ ಜೀ಼ ಕನ್ನಡ ಮತ್ತು ಜೀ಼ ಕನ್ನಡ ಎಚ್.ಡಿ.ಯಲ್ಲಿ ಮಾತ್ರ ವೀಕ್ಷಿಸಲು ಟ್ಯೂನ್ ಮಾಡಿರಿ.

This Article Has 1 Comment
  1. Pingback: aco cornhole boards

Leave a Reply

Your email address will not be published. Required fields are marked *

Translate »
error: Content is protected !!