ಗ್ಲಾಮರ್ ಪಾತ್ರಗಳಿಂದಲೇ ಸಿಕ್ಕಾಪಟ್ಟೆ ಗಮನ ಸೆಳೆದ ನಟಿ ನಮಿತಾ ಮೂಲತಃ ಗುಜರಾತ್‌ನವರಾದ ಈ ನಟಿ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದು ಟಾಲಿವುಡ್ ಮೂಲಕ. ಆನಂತರ ಅವರು ತಮಿಳಿನಲ್ಲೂ ಜನಪ್ರಿಯರಾದರು. 2006ರಲ್ಲಿ ತೆರೆಕಂಡ ‘ನೀಲಕಂಠ’ ಚಿತ್ರದಲ್ಲಿ ರವಿಚಂದ್ರನ್‌ಗೆ ನಾಯಕಿಯಾಗುವ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದರು. 38ರ ಹರೆಯದ ಈ ನಟಿ ಈಗ ತಮ್ಮ ನ್ಯೂ ಲುಕ್ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಹೌದು, ನಟಿ ನಮಿತಾ ಹೆಚ್ಚು ಸುದ್ದಿಯಾಗಿದ್ದು, ದೇಹದ ಮೂಲಕ. ನೋಡೋಕೆ ಸ್ವಲ್ಪ ದಪ್ಪ ಇದ್ದಿದ್ದರಿಂದ ಆ ವಿಚಾರ ಪದೇಪದೇ ಚರ್ಚೆಗೆ ಬರುತ್ತಿತ್ತು. ಆದರೀಗ ಬೋಲ್ಡ್ ನಮಿತಾ, ಸಖತ್ ಸ್ಲಿಮ್ ಆಗಿದ್ದಾರೆ. ಆ ಹೊಸ ಲುಕ್ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಅಭಿಮಾನಿಗಳು ಕೂಡ ಈ ಫೋಟೋಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಅವರು ಚಿತ್ರರಂಗದಲ್ಲಿ ಒಳ್ಳೊಳ್ಳೆಯ ಪಾತ್ರಗಳ ಮರಳುವ ಸೂಚನೆ ನೀಡಿದ್ಧಾರೆ.
@ಬಿಸಿನಿಮಾಸ್
Be the first to comment