‘ಆಮ್ಲೆಟ್`ಚಿತ್ರಕ್ಕೆ ಬಿರುಸಿನ ಚಿತ್ರೀಕರಣ

ಶೇಖರ್ ಜಯರಾಂ ಅರ್ಪಿಸುವ,  ಎಲಿವೇಷನ್ ಲಾಂಛನದಲ್ಲಿ ಓಂಪ್ರಕಾಶ್ ಮತ್ತು ಪ್ರಸನ್ನ ಅವರು ನಿರ್ಮಿಸುತ್ತಿರುವ ‘ಆಮ್ಲೆಟ್‘ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.

‘ಡೇ ಇನ್ ದಿ ಸಿಟಿ’, ‘ಕೆಂಪಿರ್ವೆ`, ‘ಬಬ್ಲೂಷ` ಹಾಗೂ ತಮಿಳಿನ `ಉನರ್ವು` ಚಿತ್ರಗಳನ್ನು ನಿರ್ದೇಶಿಸಿರುವ ವೆಂಕಟ್ ಭಾರದ್ವಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರ ಕಾಮಿಡಿ ಕಥಾ ಹಂದರ ಹೊಂದಿದೆ. ವಿಶಾಖ್ ರಾಮಪ್ರಸಾದ್ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ರಾಕೇಶ್ ಅಡಿಗ, ವಿರಾಜ್ ಹಾಗೂ ಮಹೇಶ್ ಹಾಡುಗಳನ್ನು ಬರೆದಿದ್ದಾರೆ. ಸಿ.ಜಿ ಜೈದೇವನ್ ಛಾಯಾಗ್ರಹಣ ಹಾಗೂ ಚಂದನ್ ಅವರ ಸಂಕಲನ ಈ ಚಿತ್ರಕ್ಕಿದೆ.   ಗುರುರಾಜ ದೇಸಾಯಿ ಸಂಭಾಷಣೆ ಬರೆದಿದ್ದಾರೆ. ಲಾರೆನ್ಸ್ ಪ್ರೀತಂ ಅವರ ಸಹ ನಿರ್ದೇಶನ ಈ ಚಿತ್ರಕ್ಕಿದೆ.

ಸಂಯುಕ್ತ ಹೊರನಾಡು, ನವೀನ್, ನಿರಂಜನ್ ದೇಶಪಾಂಡೆ, ಬಿ.ಡಿ ಸತೀಶ್ ಚಂದ್ರ, ಶೋಭ್‌ರಾಜ್, ಶರ್ಮಿತ ಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!