‘ಶ್ರೀರಾಮಚಂದ್ರ’ ಚಿತ್ರಕ್ಕೆ ಸೋನಲ್ ಸೇರ್ಪಡೆ

‘ಸು ಫ್ರಮ್ ಸೋ’ ಖ್ಯಾತಿಯ ಶನೀಲ್ ಗೌತಮ್ ನಟನೆಯ ‘ಶ್ರೀರಾಮಚಂದ್ರ’ ಚಿತ್ರತಂಡಕ್ಕೆ  ಸೋನಲ್ ಮೊಂತೆರೋ  ಸೇರಿಕೊಂಡಿದ್ದಾರೆ.

ಬಿಕೆ ಗಂಗಾಧರ್ ನಿರ್ಮಾಣದ, ಚಂದ್ರಮೋಹನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ  ‘ಶ್ರೀರಾಮಚಂದ್ರ’ ಚಿತ್ರದ ಬಹುಪಾಲು ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಸದ್ಯ ಕೊನೆಯ ಐದು ದಿನಗಳ ಚಿತ್ರೀಕರಣ ಬಾಕಿ ಉಳಿದಿದೆ. ಸೋನಲ್ ಮೊಂತೆರೋ ‘ಶ್ರೀರಾಮಚಂದ್ರ’ ಚಿತ್ರಕ್ಕೆ ಸಂಬಂಧಿಸಿದ ತಮ್ಮ ಭಾಗದ ಚಿತ್ರೀಕರಣವನ್ನು ಈಗಾಗಲೇ ಪೂರ್ಣಗೊಳಿಸಿದ್ದಾರೆ ಎನ್ನಲಾಗಿದೆ.

‘ಸು ಫ್ರಮ್ ಸೋ’  ಚಿತ್ರದಲ್ಲಿ ‘ರವಿ ಅಣ್ಣ’ನ ಪಾತ್ರದ ಮೂಲಕ ಮೆಚ್ಚುಗೆ ಗಳಿಸಿದ್ದ ಶನೀಲ್ ಗೌತಮ್ ಅವರೊಂದಿಗೆ ಸೋನಲ್  ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.  ‘ಪಂಚತಂತ್ರ’,  ‘ಬನಾರಸ್’ ಮತ್ತು ‘ರಾಬರ್ಟ್’ ಚಿತ್ರಗಳ  ಪಾತ್ರಗಳ ಮೂಲಕ ಚಿತ್ರದ ಮೂಲಕ ಸೋನಲ್ ಗುರುತಿಸಿಕೊಂಡರು. ಸದ್ಯ ಇವರು ಈ ವಾರ ಬಿಡುಗಡೆಯಾಗಲಿರುವ ‘ರಿಲ್ಯಾಕ್ಸ್’ ಚಿತ್ರದಲ್ಲಿ ಕೋಮಲ್ ಕುಮಾರ್ ಅವರೊಂದಿಗೆ ನಟಿಸಿದ್ದಾರೆ.

ನಿರ್ಮಾಪಕ ಉದಯ್ ಕೆ. ಮೆಹ್ತಾ ಅವರ ಕಥೆಯನ್ನು ಆಧರಿಸಿ, ಚಂದ್ರಮೋಹನ್ ಮತ್ತು ಶನೀಲ್ ಅವರು ‘ಶ್ರೀರಾಮಚಂದ್ರ’ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದಾರೆ. ಸಹೋದರರ ನಡುವಿನ ಜಗಳಗಳು, ಭಾವನಾತ್ಮಕ ಸಂಘರ್ಷಗಳು, ಕೌಟುಂಬಿಕ ಬಾಂಧವ್ಯಗಳ ಸುತ್ತ ಹೆಣೆಯಲಾದ ಚಿತ್ರವು, ಹಾಸ್ಯ ಮತ್ತು ಭಾವನೆಗಳ  ಸಮ್ಮಿಲನವಾಗಿದೆ.

ಚಿತ್ರತಂಡದಲ್ಲಿ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಖ್ಯಾತಿಯ ಪ್ರವೀಣ್, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಾಜೆ ಇದ್ದಾರೆ. ‘ಸು ಫ್ರಮ್ ಸೋ’ ಚಿತ್ರದಲ್ಲಿ ಕೆಲಸ ಮಾಡಿದ್ದ ಚಂದ್ರಶೇಖರನ್ ಛಾಯಾಗ್ರಹಣದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಲಿಖಿತ್ ಪ್ರಸಾದ್ ಶೆಟ್ಟಿ ಸಂಗೀತ ಸಂಯೋಜಿಸುತ್ತಿದ್ದಾರೆ.

—-

 

Be the first to comment

Leave a Reply

Your email address will not be published. Required fields are marked *

Translate »
error: Content is protected !!