ನೆಟ್‌ಫ್ಲಿಕ್ಸ್‌ನ ಮೊದಲ ಪಾಕಿಸ್ತಾನಿ ಮೂಲದ ವೆಬ್ ಸಿರೀಸ್ ‘ಜೋ ಬಚೇ ಹೈ ಸಂಗ್ ಸಮೈತ್ ಲೋ’ ನ್ನು ಭಾರತದಲ್ಲಿ ನಿಷೇಧಿಸುವಂತೆ ಕೋರಿ ಚಲನಚಿತ್ರ ಕಾರ್ಮಿಕರ ಸಂಘಟನೆ ‘ಆಲ್ ಇಂಡಿಯನ್ ಸಿನೆಮಾ ವರ್ಕರ್ಸ್ ಅಸೋಸಿಯೇಷನ್’ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ.
ಪಾಕಿಸ್ತಾನಿ ವೆಬ್ ಸರಣಿಯ ಭಾರತ ಸರ್ಕಾರದ ಸಲಹಾ ಸೂಚನೆ ಮತ್ತು ರಾಷ್ಟ್ರದ ಭಾವನೆಗಳಿಗೆ ವಿರುದ್ಧವಾಗಿದೆ ಎಂದು ಚಲನಚಿತ್ರ ಕಾರ್ಮಿಕರ ಸಂಘಟನೆ ಪ್ರತಿಪಾದಿಸಿದೆ. ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಹಾಗೂ ನೆಟ್‌ಫ್ಲಿಕ್ಸ್ ಇಂಡಿಯಾಗೂ ಕಳುಹಿಸಲಾದ ಪತ್ರದಲ್ಲಿ ಪಾಕಿಸ್ತಾನವನ್ನು “ಭಯೋತ್ಪಾದಕ ರಾಷ್ಟ್ರ” ಎಂದು ಕರೆದಿರುವ ಸಂಘಟನೆ, ಅದು ಎಂದಿಗೂ ಭಾರತದ ಒಳಿತನ್ನು ಬಯಸುವುದಿಲ್ಲ ಎಂದು ಹೇಳಿದೆ.
ಪುಲ್ವಾಮಾ ದಾಳಿಯ ನಂತರ ಭಾರತೀಯ ಚಲನಚಿತ್ರೋದ್ಯಮದಲ್ಲಿ ಪಾಕಿಸ್ತಾನಿ ಕಲಾವಿದರು ಕೆಲಸ ಮಾಡುವುದನ್ನು ಆಲ್ ಇಂಡಿಯನ್ ಸಿನೆಮಾ ವರ್ಕರ್ಸ್ ಅಸೋಸಿಯೇಷನ್’ ನಿಷೇಧಿಸಿತ್ತು. ಭಾರತ ಸರ್ಕಾರವೂ ಕೂಡ ಪಾಕಿಸ್ತಾನಿ ಕಲಾವಿದರು ಮತ್ತು ವಿಷಯಗಳ ಮೇಲೆ ನಿರ್ಬಂಧಗಳನ್ನು ವಿಧಿಸಿತ್ತು.
ನೆಟ್‌ಫ್ಲಿಕ್ಸ್ ಪಾಕಿಸ್ತಾನದ ಸಿರೀಸ್ ಟ್ರೈಲರ್ ಅನ್ನು ಮಂಗಳವಾರ ರಿಲೀಸ್ ಮಾಡಿದೆ. ಡಿಸೆಂಬರ್ 4 ರಂದು ಬಿಡುಗಡೆಯಾಗಲಿರುವ ಈ ಸರಣಿ ಭಾರತದಲ್ಲೂ ಲಭ್ಯವಿರುತ್ತದೆಯೇ ಅಥವಾ ಕೇವಲ ಪಾಕಿಸ್ತಾನ ಮತ್ತು ಇತರ ದೇಶಗಳಿಗೆ ಮಾತ್ರ ಸೀಮಿತವಾಗಿದೆಯೇ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ.
—–





Be the first to comment