‘ಜಾಕಿ 42’ ಸಿನಿಮಾ ಗೆಲ್ಲದಿದ್ದರೆ ಬದುಕೇ ಮಣ್ಣು’ ಎಂದು ನಟ ಕಿರಣ್ ರಾಜ್ ಹೇಳಿದ್ದಾರೆ.
ಈ ಸಿನಿಮಾ ತಮ್ಮ ಪಾಲಿಗೆ ದೊಡ್ಡ ಬೆಟ್ಟಿಂಗ್ ಇದ್ದಂತೆ. ಕಲ್ಲಿಗೆ ಏಟು ಬಿದ್ದಾಗಲೇ ಅದು ಶಿಲೆಯಾಗುತ್ತದೆ ಎಂಬ ಮಾತಿದೆ. ಆದರೆ ನಿರಂತರವಾಗಿ ಏಟು ಬೀಳುತ್ತಲೇ ಇದ್ದರೆ ಅದೇ ಕಲ್ಲು ಮಣ್ಣಾಗಬಹುದು. ಮಣ್ಣಾಗುವ ಮೊದಲು ಜೀವನದಲ್ಲಿ ಒಮ್ಮೆಯಾದರೂ ಶಿಲೆಯಾಗಿ ನಿಲ್ಲಬೇಕು. ಈ ಗೆಲುವಿಗಾಗಿ ಕುಟುಂಬ ಮತ್ತು ಸ್ನೇಹಿತರನ್ನೂ ಬಿಟ್ಟು ಓಡುತ್ತಿರುವುದಾಗಿ ಕಿರಣ್ ರಾಜ್ ಭಾವುಕರಾಗಿದ್ದಾರೆ.
ತಮ್ಮ ಸಾಮರ್ಥ್ಯಕ್ಕೆ ತಕ್ಕ ಅವಕಾಶಗಳು ಸಿಗದಿದ್ದಾಗ ಕೆಲವೊಮ್ಮೆ ಕಟ್ಟಿಹಾಕಿದ ಅನುಭವವಾಗುತ್ತದೆ. ಯಾವುದೇ ಹಿನ್ನೆಲೆ ಇಲ್ಲದ ಹತ್ತು ವರ್ಷಗಳ ಕಲಾ ಪಯಣದಲ್ಲಿ ಮಾಧ್ಯಮಗಳು ಸಾಕಷ್ಟು ಬೆಂಬಲ ನೀಡಿವೆ. ಈ ಹತ್ತು ವರ್ಷಗಳ ಪಯಣದಲ್ಲಿ ಮಾಧ್ಯಮಗಳು ಸಾಕಷ್ಟು ಬೆಂಬಲ ನೀಡಿವೆ. ಕಿರುತೆರೆಯಲ್ಲಿ ಪ್ರೇಕ್ಷಕರು ತೋರಿದ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ನಿರ್ದೇಶಕ ಗುರುತೇಜ್ ಶೆಟ್ಟಿ ಸಿನಿಮಾಗಳ ಪಾತ್ರಗಳನ್ನು ಬರೆಯುವಾಗ ತಮ್ಮನ್ನು ನೆನಪಿಸಿಕೊಂಡಿದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ 18ರಂದು ‘ಜಾಕಿ 42’ ಸಿನಿಮಾ ತೆರೆಗೆ ಬರಲಿದೆ. ಈ ಚಿತ್ರ ಕಿರಣ್ ರಾಜ್ ಅವರ ಸಿನಿಮಾ ಪಯಣಕ್ಕೆ ಯಾವ ತಿರುವು ನೀಡಲಿದೆ ಎಂಬ ಕುತೂಹಲ ಮೂಡಿದೆ.
—-





Be the first to comment