ಕೌಂತೇಯ

‘ಕೌಂತೇಯ’ ಚಿತ್ರದ‌ ‘ಚಿಗುರೆಲೆಯ ತುದಿಯ ಮೇಲೆ’ ಹಾಡು ಬಿಡುಗಡೆ

ಕುಂಭರಾಶಿ, ಕಾಗೆಮೊಟ್ಟೆ ಖ್ಯಾತಿಯ ಬಿ.ಕೆ. ಚಂದ್ರಹಾಸ್ ಅವರ ನಿರ್ದೇಶನದ ಮತ್ತೊಂದು ಎಮೋಷನಲ್, ಥ್ರಿಲ್ಲರ್ ಚಿತ್ರ ‘ಕೌಂತೇಯ’. ಶ್ರೀ ಮಹಾಂಕಾಳಿ ಪಿಕ್ಚರ್ಸ್ ಅಡಿ ಜಿ.ಸುರೇಶ್ ಕುಮಾರ್ ಅವರು ನಿರ್ಮಿಸಿರುವ ಈ ಚಿತ್ರದ ‘ಚಿಗುರೆಲೆಯ ತುದಿಯ ಮೇಲೆ’ ಎಂಬ ಹಾಡಿನ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ನಿರ್ದೇಶಕರೇ ರಚಿಸಿರುವ ಈ ಹಾಡಿಗೆ ಸಂಚಿತ್ ಹೆಗ್ಡೆ ದನಿಯಾಗಿದ್ದಾರೆ.

ಈ ಚಿತ್ರದಲ್ಲಿ ಹಿರಿಯನಟ ಅಚ್ಯುತ್ ಕುಮಾರ್ ಸಬ್-ಇನ್ಸ್‌ಪೆಕ್ಟರ್ ರಂಗನಾಥನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ನಟ ಮನೋರಂಜನ್ ರವಿಚಂದ್ರನ್ ಇದೇ ಮೊದಲಬಾರಿಗೆ ನೆಗೆಟಿವ್ ಶೇಡ್ ಇರುವ ವಿಶೇಷ ಪಾತ್ರವನ್ನು ನಿರ್ವಹಿಸಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಪ್ರಿಯಾಂಕ ತಿಮ್ಮೇಶ್ ಒಬ್ಬ ಎಸಿಪಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
‘ಕೌಂತೇಯ’ ಕುಂತೀಪುತ್ರ ಕರ್ಣನ ಇನ್ನೊಂದು ಹೆಸರಾದರೂ, ಇದು ಪೌರಾಣಿಕ ಕಥೆಯಲ್ಲ, ಮರ್ಡರ್ ಮಿಸ್ಟ್ರಿ ಆಧಾರಿತ ಎಮೋಷನಲ್ ಕ್ರೈಮ್ ಥ್ರಿಲ್ಲರ್.

ವೇದಿಕೆಯಲ್ಲಿ ಸಾಂಗ್ ಲಾಂಚ್ ನಂತರ ನಿರ್ದೇಶಕ ಬಿ.ಕೆ.ಚಂದ್ರಹಾಸ್ ಮಾತನಾಡುತ್ತ ಪೊಲೀಸ್ ಮತ್ತು ವಿಲನ್ ಹಿನ್ನೆಲೆಯ, ಸಾಕಷ್ಟು ಟ್ವಿಸ್ಟ್ ಅಂಡ್ ಟರ್ನ್ಸ್ ಇರುವ ಚಿತ್ರವಿದು. ಕಥೆ ರೆಡಿ ಮಾಡಿಕೊಂಡ ನಂತರ ಒಬ್ಬ ಸಾಫ್ಟ್ ವಿಲನ್ ಬೇಕು ಅನಿಸಿದಾಗ, ಮನು ಅವರೇ ಅದಕ್ಕೆ ಸೂಕ್ತ ಅನಿಸಿತು. ಬೆಂಗಳೂರು, ಮೈಸೂರು ಸುತ್ತಮುತ್ತ 3 ಹಂತಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಿದ್ದೇವೆ. ಇದನ್ನು ಫೈಟ್ ಬಿಹೈಂಡ್ ಎ ಕಾಪ್ ಅಂಡ್ ವಿಲನ್ ಎನ್ನಬಹುದು. ಚಿತ್ರ ನೋಡಿದಾಗ ಈ ಕೆಲವು ತಪ್ಪುಗಳನ್ನು ನಾವು ಮಾಡಬಾರದು ಅನಿಸುತ್ತೆ. ರಕ್ತಪಾತ ಒಳ್ಳೆಯದಲ್ಲ ಎಂದು ಚಿತ್ರದ ಮೂಲಕ ಹೇಳಹೊರಟಿದ್ದೇವೆ. ಡಿಸೆಂಬರ್ ನಲ್ಲಿ ತುಂಬಾ ಸಿನಿಮಾಗಳು ಇರುವುದರಿಂದ ಜನವರಿಯಲ್ಲಿ ರಿಲೀಸ್ ಮಾಡೋ ಪ್ಲಾನಿದೆ ಎಂದರು.

ಕೌಂತೇಯ

ನಟ ಮನೋರಂಜನ್ ಮಾತನಾಡುತ್ತ ವಿಲನ್ ಥರದ ಪಾತ್ರ ನನ್ನದು, ಇ ವಿಭಿನ್ನವಾಗಿದೆ. ಆರಂಭದಲ್ಲಿ ಈ ಹಾಡು ಇರಲಿಲ್ಲ. ಸಿನಿಮಾದ ಟ್ರ್ಯಾಕ್ ಪೊಜಿಷನ್ ನಲ್ಲಿ ಬರುತ್ತೆ. ಅಪ್ಪುಕಪ್ ಆಡುವಾಗ ಚಂದ್ರಹಾಸ ಅವರು ಪರಿಚಯವಾದರು ಎಂದರು.

ಸಂಗೀತ ನಿರ್ದೇಶಕ ರಾಘವೇಂದ್ರ ಮಾತನಾಡಿ ಚಿತ್ರದಲ್ಲಿ ೨ ಹಾಡುಗಳಿವೆ. ಈ ಹಾಡು ಒಂದು ಮಗುವಿನ ಥರ ಇರಬೇಕೆಂದು ನಿರ್ದೇಶಕರು ಹೇಳಿದ್ದರು ಎಂದುಹಾಡಿನ ವಿಶೇಷತೆ ವಿವರಿಸಿದರು. ಸಂಭಾಷಣೆ ರಚಿಸಿದ ಹರಿ ಮಹದೇವ್ ಮಾತನಾಡಿ ಕ್ಲೈಮ್ಯಾಕ್ಸ್ ಹಂತದಲ್ಲಿ ಈ ಹಾಡು ಬರುತ್ತೆ ಎಂದರು.

ನಾಯಕಿ ವಿಯಾರಾ ರಿದ್ದಿ ಮಾತನಾಡುತ್ತ ನಾನು ಮನೋರಂಜನ್ ಅವರ ಪೇರ್ ಆಗಿ ನಟಿಸಿದ್ದೇನೆ. ನಿರ್ದೇಶಕರು ಈ ಹಾಡನ್ನು ತುಂಬಾ ಅರ್ಥಪೂರ್ಣವಾಗಿ ಬರೆದಿದ್ದಾರೆ ಎಂದರು.

ಪಿ.ಎಲ್.ರವಿ ಅವರ ಛಾಯಾಗ್ರಹಣ, ಅನುರಂಜನ್ ಅವರ ಸಂಕಲನ ಹಾಗೂ ಸಂಭಾಷಣೆ ಈ ಚಿತ್ರಕ್ಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!