ರಾಮಾಯಣ

‘ರಾಮಾಯಣ’: 6 ದಿನಗಳಲ್ಲಿ ಕನ್ನಡದಲ್ಲಿ 50 ಕೋಟಿ ಕಲೆಕ್ಷನ್!

ಬಿಡುಗಡೆಯಾದ ಕೇವಲ ಆರು ದಿನಗಳಲ್ಲಿ ‘ರಾಮಾಯಣ’ ಕನ್ನಡ ಆವೃತ್ತಿ 50 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.

ಡಬ್ಬಿಂಗ್ ಸಿನಿಮಾಗಳು ಕನ್ನಡದಲ್ಲಿ ದೊಡ್ಡ ಮಟ್ಟದ ಗಳಿಕೆ ಮಾಡುವುದು ಕಷ್ಟ ಎಂಬ ಲೆಕ್ಕಾಚಾರಕ್ಕೆ ‘ರಾಮಾಯಣ’ ತಿರುಗೇಟು ನೀಡಿದೆ. ಈ ಯಶಸ್ಸಿನ ಹಿಂದೆ ಚಿತ್ರದ ಡಬ್ಬಿಂಗ್ ಗುಣಮಟ್ಟ ಪ್ರಮುಖ ಪಾತ್ರ ವಹಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಯಶ್, ರಣಬೀರ್ ಕಪೂರ್, ಸಾಯಿ ಪಲ್ಲವಿ ಅಭಿನಯದ ‘ರಾಮಾಯಣ’  ಕನ್ನಡ ಪ್ರೇಕ್ಷಕರಿಂದಲೂ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದೆ. ಕನ್ನಡ ಸಂಭಾಷಣೆಗೆ ಹೊಂದುವ ಧ್ವನಿಗಳು, ಪಾತ್ರಗಳಿಗೆ ಸೂಕ್ತವಾದ ಧ್ವನಿ ಆಯ್ಕೆ,  ಎಐ ತಂತ್ರಜ್ಞಾನದ ಬಳಕೆಯಿಂದ ನಟರ ತುಟಿ ಚಲನೆಗೆ ಕನ್ನಡ ಸಂಭಾಷಣೆ ಹೊಂದಾಣಿಕೆ ಮಾಡಲಾಗಿದೆ ಎನ್ನಲಾಗಿದೆ. ಇದರಿಂದ ಕನ್ನಡದಲ್ಲಿ ನಿರ್ಮಾಣವಾದ ಸಿನಿಮಾ ನೋಡುವ ಅನುಭವ ಪ್ರೇಕ್ಷಕರಿಗೆ ಸಿಗುತ್ತಿದೆ.

‘ಟಾಕ್ಸಿಕ್’ ಕನ್ನಡ ಆವೃತ್ತಿ  56 ಕೋಟಿ ರೂಪಾಯಿ ಗಳಿಸಿತ್ತು.  ಆದರೆ ‘ರಾಮಾಯಣ’ ಕೇವಲ 6 ದಿನಗಳಲ್ಲಿ 50 ಕೋಟಿ ರೂಪಾಯಿ ಗಡಿ ದಾಟಿ  ‘ಟಾಕ್ಸಿಕ್’ ದಾಖಲೆಯನ್ನು ಹಿಂದಿಕ್ಕುವ ಸಾಧ್ಯತೆಯಿದೆ.

ಜಾಗತಿಕ ಗಳಿಕೆಯಲ್ಲೂ ‘ರಾಮಾಯಣ’ ದೊಡ್ಡ ಮಟ್ಟದ ಸಾಧನೆ ಮಾಡಿದೆ.  6 ದಿನಗಳಲ್ಲಿ ವಿಶ್ವಾದ್ಯಂತ 823 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!