ಪವನ್ ಕಲ್ಯಾಣ್ ಮಾಜಿ ಪತ್ನಿ ಹೇಳಿಕೆ ಮತ್ತೆ ಚರ್ಚೆ

ನಟ ಪವನ್ ಕಲ್ಯಾಣ್ ತಮ್ಮ ಮೂರನೇ ಪತ್ನಿ ಅನ್ನಾ ಕೊನಿಡೆಲಾ ಅವರಿಂದ ವಿಚ್ಛೇದನ ಘೋಷಿಸಿದ ಬೆನ್ನಲ್ಲೇ,  ಪವನ್ ಮಾಜಿ ಪತ್ನಿ ರೇಣು ದೇಸಾಯಿ ಹೇಳಿಕೆ ವ್ಯಾಪಕ ವೈರಲ್ ಆಗುತ್ತಿದೆ.

ಈ ಹಿಂದೆ ತಾವು ಮರುಮದುವೆಯಾಗುವ ಆಸೆ ವ್ಯಕ್ತಪಡಿಸಿದ್ದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಹಾಗೂ ಟ್ರೋಲ್‌ಗಳಿಗೆ ಗುರಿಯಾಗಿದ್ದ ರೇಣು ದೇಸಾಯಿ ಟೀಕಾಕಾರರಿಗೆ ಖಡಕ್ ಉತ್ತರ ನೀಡಿದ್ದರು. ‘ಪುರುಷರು ಎಷ್ಟು ಮದುವೆಯಾದರೂ ಸಮಾಜ ಒಪ್ಪಿಕೊಳ್ಳುತ್ತದೆ. ಆದರೆ ಮಹಿಳೆಯರು ಮತ್ತೊಂದು ಸಂಬಂಧದ ಬಗ್ಗೆ ಯೋಚಿಸಿದರೂ ಅದನ್ನು ತಪ್ಪಾಗಿ ನೋಡಲಾಗುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಎಬಿಎನ್ ತೆಲುಗುಗೆ ನೀಡಿದ್ದ ಸಂದರ್ಶನವೊಂದರಲ್ಲಿ ”ಈಗಲೂ ಪ್ರೀತಿಯ ಬಗ್ಗೆ ನನಗೆ ಅಷ್ಟೊಂದು ನಿರೀಕ್ಷೆಗಳಿಲ್ಲ. ಸಿನಿಮಾಗಳಲ್ಲಿ ತೋರಿಸುವಂತಹ ರೊಮ್ಯಾಂಟಿಕ್ ಪ್ರೀತಿ ಬೇಕೆಂದೇನಿಲ್ಲ. ಆದರೆ ಜೀವನದಲ್ಲಿ ಜೊತೆಯಾಗಿರಲು ಒಬ್ಬ ಸಂಗಾತಿ ಬೇಕು” ಎಂದು ರೇಣು ದೇಸಾಯಿ ಹೇಳಿದ್ದರು.

ಪವನ್ ಕಲ್ಯಾಣ್ ಮತ್ತು ಅವರ ಮೂರನೇ ಪತ್ನಿ ಅನ್ನಾ ಕೊನಿಡೆಲಾ 13 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಲು ನಿರ್ಧರಿಸಿ ತಮ್ಮ ಖಾಸಗಿತನವನ್ನು ಗೌರವಿಸುವಂತೆ ಅಭಿಮಾನಿಗಳು ಮತ್ತು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಪವನ್ ಕಲ್ಯಾಣ್  ವಿಚ್ಛೇದನದ ಸುದ್ದಿ ಹೊರಬಿದ್ದ ಬೆನ್ನಲ್ಲೇ ರೇಣು ದೇಸಾಯಿ ಅವರ ಹಿಂದಿನ ಹೇಳಿಕೆ  ಚರ್ಚೆ ಆಗುತ್ತಿದೆ.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!