ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ ‘ಕಿಂಗ್’ ಸಿನಿಮಾದಿಂದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹೊರ ಬಂದಿದ್ದಾರೆ.
ದಕ್ಷಿಣ ಭಾರತದ ಸಿನಿಮಾಗಳ ಕೆಲಸದಲ್ಲಿ ಬ್ಯುಸಿಯಾಗಿರುವ ಅನಿರುದ್ಧ್ ಅವರಿಗೆ ‘ಕಿಂಗ್’ ಚಿತ್ರಕ್ಕೆ ಸಂಪೂರ್ಣ ಸಮಯ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಚಿತ್ರತಂಡದ ಜೊತೆ ಚರ್ಚಿಸಿದ ಬಳಿಕ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಅನಿರುದ್ಧ್ ‘ಕಿಂಗ್’ ಸಿನಿಮಾಕ್ಕಾಗಿ ಈಗಾಗಲೇ ಒಂದು ಭರ್ಜರಿ ಥೀಮ್ ಟ್ರ್ಯಾಕ್ ಸಂಯೋಜಿಸಿದ್ದಾರೆ. ಅನಿರುದ್ಧ್ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡದಿದ್ದರೂ ಅವರ ಸಂಗೀತದ ಸ್ಪರ್ಶ ಚಿತ್ರದಲ್ಲಿ ಇರಲಿದೆ.
ಚಿತ್ರದ ಉಳಿದ ಸಂಗೀತದ ಜವಾಬ್ದಾರಿಯನ್ನು ಬಾಲಿವುಡ್‌ನ ಜನಪ್ರಿಯ ಸಂಗೀತ ನಿರ್ದೇಶಕ ಜೋಡಿ ಸಚಿನ್-ಜಿಗರ್ ವಹಿಸಿಕೊಂಡಿದೆ. ಅನಿರುದ್ಧ್ ಸಂಯೋಜಿಸಿರುವ ಥೀಮ್ ಟ್ರ್ಯಾಕ್ ನ್ನು ಮರುರೂಪಿಸುವುದರ ಜೊತೆಗೆ ಹಿನ್ನೆಲೆ ಸಂಗೀತ ಮತ್ತು ಉಳಿದ ಹಾಡುಗಳ ಕೆಲಸ ಈ ಜೋಡಿ ಪೂರ್ಣಗೊಳಿಸಲಿದೆ.
ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಕಿಂಗ್’ ಸಿನಿಮಾ ಶಾರುಖ್ ಖಾನ್ ಅವರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಕ್ರಿಸ್‌ಮಸ್ ರಜೆಯ ಅವಧಿಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.





Be the first to comment