ವಿಜಯ ಪ್ರಸಾದ್ ಚಿತ್ರದಲ್ಲಿ ರಚಿತಾ ರಾಮ್

ವಿಮರ್ಶಕರ ಮೆಚ್ಚುಗೆ ಪಡೆದಿರುವ ನಿರ್ದೇಶಕ ವಿಜಯ ಪ್ರಸಾದ್  ಚಿತ್ರದಲ್ಲಿ ರಚಿತಾ ರಾಮ್ ಕಾಣಿಸಿಕೊಳ್ಳಲಿದ್ದಾರೆ.

ಇದೊಂದು ಮಹಿಳಾ ಪ್ರಧಾನ ಕೌಟುಂಬಿಕ ಪ್ರೇಮಕಥೆಯಾಗಲಿದೆ. ವಿಜಯ ಪ್ರಸಾದ್ ಅವರೊಂದಿಗೆ ರಚಿತಾ ರಾಮ್ ಕೈಜೋಡಿಸುತ್ತಿರುವ ಮೊದಲ ಚಿತ್ರ ಇದಾಗಿದೆ. ಇದು ಬಾಂಧವ್ಯಗಳ ಸುತ್ತ ಹೆಣೆಯಲಾದ ಮನಮುಟ್ಟುವ  ಪ್ರೇಮಕಥೆ ಎಂದು ಬಣ್ಣಿಸಲಾಗಿದೆ.

ವಿಜಯ ಪ್ರಸಾದ್ ಅವರ ಹಿಂದಿನ ಚಿತ್ರಗಳು ಹೆಚ್ಚಾಗಿ ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಿಗೆ ಸೀಮಿತವಾಗಿದ್ದವು.  ಈ ಚಿತ್ರ ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರದ ಕಣಿವೆಗಳು,  ಹಿಮಾಲಯ, ವಿದೇಶದ ಕೆಲವು ತಾಣಗಳಲ್ಲಿಯೂ ಚಿತ್ರೀಕರಣ ನಡೆಸಲು  ಉದ್ದೇಶಿಸಲಾಗಿದೆ.

ರಚಿತಾ ರಾಮ್ ಅವರೊಂದಿಗೆ ಅಚ್ಯುತ್ ಕುಮಾರ್ ಮತ್ತು ರಂಗಾಯಣ ರಘು ಕಾಣಿಸಿಕೊಳ್ಳಲಿದ್ದಾರೆ. ರಚಿತಾ ಅವರೊಂದಿಗೆ ನಟಿಸಲು ಚಿತ್ರತಂಡ  ನಟನಿಗಾಗಿ ಹುಡುಕಾಟ ನಡೆಸುತ್ತಿದೆ.

ವಿಜಯ್ ಪ್ರಸಾದ್ ಚೊಚ್ಚಲ   ಚಿತ್ರ  ‘ಸಿದ್ಲಿಂಗು’  ಮೂಲಕ   ಗಟ್ಟಿಯಾದ ಛಾಪು ಮೂಡಿಸಿದ್ದರು. ಜಗ್ಗೇಶ್ ನಟನೆಯ ‘ನೀರ್ ದೋಸೆ’ (2016), ‘ಪೆಟ್ರೋಮ್ಯಾಕ್ಸ್’ (2022),    ಎರಡು ಭಾಗಗಳ ‘ತೋತಾಪುರಿ’ (2022–2023)   ಚಿತ್ರಗಳ ದ್ವಂದ್ವಾರ್ಥವಿದ್ದ ಸಂಭಾಷಣೆಗಳು   ಚರ್ಚೆಗೆ ಗ್ರಾಸವಾಗಿದ್ದವು. ಇದೀಗ ಲಭ್ಯವಿರುವ ಮಾಹಿತಿ ಪ್ರಕಾರ, ವಿಜಯ ಪ್ರಸಾದ್ ಅವರ ಮುಂದಿನ ಚಿತ್ರ  ಎಲ್ಲರೂ ಒಟ್ಟಾಗಿ ನೋಡಬಹುದಾದ, ಶುದ್ಧ ಕೌಟುಂಬಿಕ ಪ್ರೇಮಕಥೆಯಾಗಿ ರೂಪುಗೊಳ್ಳುತ್ತಿದೆ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!