ನಟ ಧನ್ವೀರ್ಗೆ ಬಸವೇಶ್ವರ ನಗರ, ರಾಜರಾಜೇಶ್ವರಿ ನಗರ, ಚಾಮರಾಜಪೇಟೆ ಪೊಲೀಸ್ ಠಾಣೆಗಳಿಂದ ಪ್ರತ್ಯೇಕವಾಗಿ ನೋಟಿಸ್ ಜಾರಿ ಮಾಡಲಾಗಿದೆ.
ಒಂದೊಂದು ದಿನ ಒಂದೊಂದು ಪೊಲೀಸ್ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಬೇಕಾದ ಪರಿಸ್ಥಿತಿ ಧನ್ವೀರ್ಗೆ ಎದುರಾಗಿದೆ. ಮೂರು ಪೊಲೀಸ್ ಠಾಣೆಗಳಿಂದ ನೋಟಿಸ್ ಜಾರಿಯಾಗಿದ್ದು, ವಿಚಾರಣೆ ಕುತೂಹಲ ಮೂಡಿಸಿದೆ.
ದರ್ಶನ್ ಅವರ ಆಪ್ತ ಸಹಾಯಕ ನಾಗರಾಜು ಅವರು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಧನ್ವೀರ್ ವಿರುದ್ಧ ದೂರು ದಾಖಲಿಸಿದ್ದರು. ಧನ್ವೀರ್ ಕೊಲೆ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿದ್ದಾರೆ ಎಂಬ ನಾಗರಾಜು ಅವರ ದೂರಿನ ಆಧಾರದಲ್ಲಿ ಇದೀಗ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ನಾಗರಾಜು ಅವರ ಸ್ನೇಹಿತ ಭೋಜರಾಜು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಧನ್ವೀರ್ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಅವರು ತಮ್ಮ ಬಳಿ ಇರುವುದಾಗಿ ಹೇಳಲಾದ ಕರೆಗಳ ಧ್ವನಿಮುದ್ರಿಕೆಗಳನ್ನು ಪೊಲೀಸರಿಗೆ ಸಲ್ಲಿಸಿದ್ದಾರೆ. ಈ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಾಗಿದೆ.
ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲೂ ಧನ್ವೀರ್ ವಿರುದ್ಧ ದೂರು ದಾಖಲಾಗಿದೆ. ತಮ್ಮಿಂದ ಹಣ ಮತ್ತು ಕಾರು ಪಡೆದಿದ್ದು, ಅವುಗಳನ್ನು ವಾಪಸ್ ಕೇಳಿದಾಗ ದಬ್ಬಾಳಿಕೆ ನಡೆಸಿದ್ದಾರೆ ಎಂದು ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ.
—–





Be the first to comment