ಖ್ಯಾತ ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಸಿಇಒ ಕಾವ್ಯಾ ಮಾರನ್ ಅವರು ಗ್ರೀಸ್‌ನಲ್ಲಿ ವಿವಾಹವಾಗಲಿದ್ದಾರೆ.
ಈ ವಿವಾಹ ಸಮಾರಂಭವನ್ನು ಎರಡು ದಿನಗಳ ಕಾರ್ಯಕ್ರಮವಾಗಿ ಆಯೋಜಿಸಲಾಗುತ್ತಿದ್ದು ನವೆಂಬರ್ 10 ಮತ್ತು 11 ರಂದು ನಡೆಯುವ ಸಾಧ್ಯತೆಯಿದೆ. ಗ್ರೀಸ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕುಟುಂಬದ ಆಪ್ತರು ಮತ್ತು ಆಯ್ದ ಸ್ನೇಹಿತರು ಮಾತ್ರ ಭಾಗವಹಿಸಲಿದ್ದಾರೆ. ಆರತಕ್ಷತೆ ನವೆಂಬರ್ 21 ರಂದು ಚೆನ್ನೈನಲ್ಲಿ ನಡೆಯಲಿದೆ.
ಈ ಜೋಡಿಯ ಆರತಕ್ಷತೆಯ ಆಮಂತ್ರಣ ಪತ್ರಿಕೆಯ ಝಲಕ್‌ಗಳು ನೆಟ್ಟಿಗರ ಗಮನ ಸೆಳೆದಿವೆ. ‘ಬರೋಕ್’ ಶೈಲಿಯಿಂದ ಪ್ರೇರಿತವಾದ ಈ ಆಮಂತ್ರಣ ಪತ್ರಿಕೆ ತಿಳಿ ನೀಲಿ ಬಣ್ಣದ ವಿಶೇಷ ಪೆಟ್ಟಿಗೆಯ ರೂಪದಲ್ಲಿದ್ದು ಗಮನ ಸಳೆಯುತ್ತಿದೆ. ಈ ಜೋಡಿಯ ವಿವಾಹದ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿದ್ದವು.

ಗ್ರೀಸ್‌ನಲ್ಲಿ ನಡೆಯಲಿರುವ ವಿವಾಹ ಸಮಾರಂಭವನ್ನು ಮಾರನ್ ಕುಟುಂಬ ನಿರ್ವಹಿಸುತ್ತಿದೆ. ಅತಿಥಿಗಳಿಗೆ ಅಗತ್ಯವಿರುವ ವಿಮಾನ ಪ್ರಯಾಣ, ವಸತಿ ಮತ್ತು ಸಾರಿಗೆ ವ್ಯವಸ್ಥೆಗಳನ್ನು ಈ ಕುಟುಂಬ ನೋಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಅತಿಥಿಗಳು ಕೇವಲ ಅಲ್ಲಿಗೆ ಆಗಮಿಸಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರೆ ಸಾಕು. ಉಳಿದ ಎಲ್ಲ ವ್ಯವಸ್ಥೆಗಳನ್ನು ಆಯೋಜಕರೇ ನಿರ್ವಹಿಸಲಿದ್ದಾರೆ.
ಅನಿರುದ್ಧ್ ರವಿಚಂದರ್ ಜನಪ್ರಿಯ ಸಂಗೀತ ಸಂಯೋಜಕರಾಗಿದ್ದು, ‘ಲಿಯೋ’, ‘ಇಂಡಿಯನ್ 2’, ‘ವೇಟ್ಟೈಯನ್’, ‘ವಿದಾಮುಯಾರ್ಚಿ’, ‘ಕೂಲಿ’ ಸೇರಿದಂತೆ ಹಲವಾರು ಪ್ರಮುಖ ಚಲನಚಿತ್ರಗಳಿಗೆ ಸಂಗೀತ ನೀಡಿದ್ದಾರೆ.
ಕಾವ್ಯಾ ಮಾರನ್ ಅವರು ಸನ್ ಗ್ರೂಪ್‌ನ ಅಧ್ಯಕ್ಷ ಕಲಾನಿಧಿ ಮಾರನ್ ಅವರ ಪುತ್ರಿಯಾಗಿದ್ದಾರೆ. ಸನ್ ಟಿವಿ ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿ, ‘ಸನ್‌ರೈಸರ್ಸ್ ಹೈದರಾಬಾದ್’ ತಂಡದ ಮಾಲೀಕರಾಗಿದ್ದಾರೆ.
—–





Be the first to comment