‘ರಾಮಾಯಣ’ದಲ್ಲಿ ಹಾಡುಗಳ ಇಸ್ಲಾಮೀಕರಣ!

‘ರಾಮಾಯಣ’ ಚಿತ್ರಕ್ಕಾಗಿ ಎ.ಆರ್. ರೆಹಮಾನ್ ಸಂಯೋಜಿಸಿರುವ ‘ಮಂಗಲ್ ರಂಗ್’ ಎಂಬ ಹಾಡಿನಲ್ಲಿ ‘ಕವ್ವಾಲಿ’ (ಸೂಫಿ ಮುಸಲ್ಮಾನರ ಭಕ್ತಿಗೀತೆ) ಶೈಲಿಯ ಪ್ರಭಾವಗಳಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಶ್ರೇಯಾ ಘೋಷಾಲ್ ಹಾಗೂ ಅರಿಜಿತ್ ಸಿಂಗ್ ಹಾಡಿರುವ ಈ ಗೀತೆಯಲ್ಲಿ, ಅನೇಕ ಕೇಳುಗರಿಗೆ ‘ಕವ್ವಾಲಿ’ ಶೈಲಿಯ ಪ್ರಭಾವ ಕಂಡು ಬಂದಿವೆ. ಹಿಂದೂ ದೇವರುಗಳು ಮತ್ತು ಸಂಪ್ರದಾಯಗಳನ್ನು ಬಿಂಬಿಸುವ ಚಿತ್ರದಲ್ಲಿ, ಸೂಫಿ ಇಸ್ಲಾಮಿಕ್ ಭಕ್ತಿಗಾಯನ ಪ್ರಕಾರ ಸೇರಿಸಿರುವುದಕ್ಕೆ  ಸಾಮಾಜಿಕ ಜಾಲತಾಣ ಬಳಕೆದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹಾಡಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಇಂತಹ ಬೃಹತ್ ಕಥಾಹಂದರವಿರುವ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ರೆಹಮಾನ್ ಸೂಕ್ತವೇ? ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಪ್ರಶ್ನಿಸಿದ್ದಾರೆ.

‘ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಎ.ಆರ್. ರೆಹಮಾನ್ ಅವರನ್ನು ಆಯ್ಕೆ ಮಾಡಿದ್ದು ಅತ್ಯಂತ ಕೆಟ್ಟ ನಿರ್ಧಾರ. ‘ರಾಕ್‌ಸ್ಟಾರ್’ ಮತ್ತು ‘ಜೋಧಾ ಅಕ್ಬರ್’ ಚಿತ್ರಗಳಲ್ಲಿ ಅವರು ಮಾಡಿದ ಕೆಲಸದ ಪ್ರಭಾವ ಇಲ್ಲಿ ಎದ್ದು ಕಾಣುತ್ತಿದೆ. ಇದು ಸಂಪೂರ್ಣವಾಗಿ ‘ಕುನ್ ಫಯಾ ಕುನ್’ ಹಾಡಿನ ಛಾಯೆಯನ್ನು ಹೊಂದಿದೆ. ‘ಛಾವಾ’ ಚಿತ್ರದಲ್ಲೂ ರೆಹಮಾನ್ ಇದೇ ರೀತಿಯ ಕೆಲಸವನ್ನೇ ಮಾಡಿದ್ದರು. ಅಜಯ್-ಅತುಲ್ ಅಥವಾ ಶಂಕರ್-ಎಹ್ಸಾನ್-ಲಾಯ್ ಅವರಂತಹ ಸಂಗೀತ ನಿರ್ದೇಶಕರು ಈ ಚಿತ್ರಕ್ಕೆ ಬೇಕಾದ ನ್ಯಾಯ ಒದಗಿಸಬಲ್ಲವರಾಗಿದ್ದರು’  ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ.

ನಿತೇಶ್ ತಿವಾರಿ ನಿರ್ದೇಶನದ ‘ ‘ರಾಮಾಯಣ: ದಿ ರೈಸ್ ಆಫ್ ಲೆಜೆಂಡ್’ ಚಿತ್ರ  2026ರ ನವೆಂಬರ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!