‘ಮುಖವಾಡ ಬೀಳಿಸೋ ತನಕ ಬಿಡಲ್ಲ.’ ಎಂದು ತಮ್ಮ ವಿರುದ್ಧ ಪೊಲೀಸ್ ಕೇಸ್ ದಾಖಲಾಗುತ್ತಲೇ ನಟ ಧನ್ವೀರ್ ಎಚ್ಚರಿಕೆ ನೀಡಿದ್ದಾರೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಧನ್ವೀರ್ ಗೌಡ ನಡುವಿನ ಶೀಥಲ ಸಮರ ಮತ್ತೊಂದು ಹಂತಕ್ಕೆ ಹೋಗಿದ್ದು, ತಮ್ಮ ವಿರುದ್ಧ ಪೊಲೀಸ್ ಕೇಸ್ ದಾಖಲಾಗುತ್ತಲೇ ಧನ್ವೀರ್ ಗರಂ ಆಗಿದ್ದಾರೆ.
ಖಾಸಗಿ ಮಾಧ್ಯಮದ ಜೊತೆಗೆ ಧನ್ವೀರ್ ಸುದೀರ್ಘವಾಗಿ ಮಾತನಾಡಿದ್ದು ‘ಈಗ ದೂರು ಕೊಟ್ಟಿದ್ದಾರಲ್ಲ.. ಅವರದ್ದೇ ಬಂಡವಾಳಗಳು ಆಚೆ ಬರುತ್ತವೆ. ಮುಖವಾಡ ಬೀಳಿಸೋ ತನಕ ಬಿಡಲ್ಲ. ನ್ಯಾಯ, ನೀತಿ ಧರ್ಮದಲ್ಲಿ ನಡೆಯುತ್ತಿರುವಾಗ ಹೆದರುವ ಮಾತೇ ಇಲ್ಲ. ಶೀಘ್ರದಲ್ಲೇ ಸುದ್ದಿಗೋಷ್ಠಿ ನಡೆಸಿ ಮುಖವಾಡ ಕಳಚಿಡುತ್ತೇನೆ’ ಎಂದು ಹೇಳಿದ್ದಾರೆ.
‘ದೂರು ಕೊಡಲಿ, ಇದಾದ್ಮೇಲೂ ನಾನು ಅವನಿಗೆ ನಿಂದನೆ ಮಾಡೇ ಮಾಡ್ತೀನಿ. ಆದ್ರೆ ಒಬ್ಬ ವುಕ್ತಿ ಸುಮ್ಮನೆ ಬೈಯ್ಯಲ್ಲ. ಏನಿಕೆ ಬೈಯ್ದೆ ಅನ್ನೋದು ಬೇಕಲ್ವಾ? ಆ ಕಾರಣ ಏನು ಅನ್ನೋದನ್ನ ಕೇಳಿ. ಯಾರ ಮ್ಯಾನೇಜರ್ ಅಂತಿದ್ದಾರಲ್ಲಾ ಈಗ, ಅವರ ಬಂಡವಾಳ ಆಚೆ ಬರುತ್ತೆ’ ಎಂದು ಖಾರವಾಗಿ ಹೇಳಿದ್ದಾರೆ.
ನಾವು ಅಂತರ ಕಾಯ್ದುಕೊಂಡಿಲ್ಲ. ಕಾಯ್ದಿರಿಸಿದ್ರು. ನಾವು ದರ್ಶನ್ ಅಣ್ಣನ ಪರವಾಗಿದ್ದೆವು. ದರ್ಶನ್ ಅಣ್ಣನ ಪರವಾಗಿದ್ದಾಗ ಆಗುತ್ತಿದ್ದ ಕೆಲಸಗಳು ಆಗಬಾರದು ಅನ್ನೋದು ಕೆಲವರಿಗೆ ಇತ್ತು. ಅವರು ಮುಂದೆ ಒಂದು, ಹಿಂದೆ ಒಂದು ಮುಖವಾಡ ಹಾಕ್ಕೊಂಡು ಬದುಕಬೇಕಿತ್ತು. ಈಗ ಮುಖವಾಡ ತೆಗೆಯುವ ಸಮಯ ಬಂದಿದೆ. ಇನ್ಮೇಲೆ ನಾವು ಶುರು ಮಾಡ್ತೀವಿ’ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪದ ಮೇಲೆ ಧನ್ವೀರ್ ಗೌಡ ವಿರುದ್ಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿತ್ತು.
—–





Be the first to comment