ಮೈಸೂರಿನಲ್ಲಿ ಕಾಲೇಜು ಓದುತ್ತಿದ್ದ ಯಶ್, ಸ್ಯಾಂಡಲ್ವುಡ್ ನಟಿ, ಬಿಗ್ ಬಾಸ್ ಖ್ಯಾತಿಯ ನಿಧಿ ಸುಬ್ಬಯ್ಯ ಮನೆ ಮುಂದೆ ಪಟಾಕಿ ಸಿಡಿಸಿ ದೊಡ್ಡ ಅವಾಂತರವನ್ನೇ ಮಾಡಿದ್ದರಂತೆ!
ನಟಿ ಪ್ರಿಯಾಮಣಿ ಅವರೊಂದಿಗಿನ ಹಳೆಯ ಸಂದರ್ಶನದಲ್ಲಿ ಯಶ್ ಹಂಚಿಕೊಂಡಿದ್ದ ಕಾಲೇಜು ದಿನಗಳ ಕಥೆ ಇದೀಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.
ಮೈಸೂರಿನಲ್ಲಿ ಕಾಲೇಜು ಓದುತ್ತಿದ್ದ ಯಶ್ ಫ್ರೆಂಡ್ಸ್ ಜೊತೆ ಮಜಾ ಮಾಡ್ತಿದ್ರಂತೆ. ಯಶ್ ಅವರ ಗೆಳೆಯನೊಬ್ಬ ಕಾಲೇಜಿನ ಹುಡುಗಿಯೊಬ್ಬಳನ್ನು ಲವ್ ಮಾಡ್ತಿದ್ದ. ಆ ಪ್ರೇಮಕಥೆಗೆ ಸಪೋರ್ಟ್ ಮಾಡಲು ಯಶ್ ಮತ್ತು ಅವರ ಫ್ರೆಂಡ್ಸ್ ಮುಂದಾಗಿದ್ರು. ಆದರೆ ಆ ಹುಡುಗಿಗೆ ಯಶ್ ಬಗ್ಗೆ ಯಾರೋ ತಪ್ಪು ಅಭಿಪ್ರಾಯ ಮೂಡಿಸಿದ್ದರಂತೆ. ಇದರಿಂದ ಸಿಟ್ಟಿಗೆದ್ದ ಯಶ್ ಮತ್ತು ಅವರ ಫ್ರೆಂಡ್ಸ್ ಹುಡುಗಿಯ ಮನೆ ಗೇಟ್ ಮುಂದೆ ಪಟಾಕಿ ಹಚ್ಚಿ ತುಂಟಾಟ ಮಾಡಿದ್ದರಂತೆ! ಆ ಹುಡುಗಿ ಬೇರೆ ಯಾರೂ ಅಲ್ಲ! ಸ್ಯಾಂಡಲ್ವುಡ್ ನಟಿ ನಿಧಿ ಸುಬ್ಬಯ್ಯ!
ಹಲವು ವರ್ಷಗಳ ಬಳಿಕ ನಿಧಿ ಸುಬ್ಬಯ್ಯ ಅವರನ್ನು ಭೇಟಿಯಾದ ಯಶ್, ಅಂದಿನ ಘಟನೆಯನ್ನು ನೆನಪಿಸಿಕೊಂಡಿದ್ದರಂತೆ. ಆಗ ನಿಧಿ ಸುಬ್ಬಯ್ಯ, ‘ನಮ್ಮ ಮನೆ ಗೇಟ್ ಮುಂದೆ ಪಟಾಕಿ ಹಚ್ಚಿದ್ದು ನೀವೇನಾ?’ ಎಂದು ಅಚ್ಚರಿಯಿಂದ ಕೇಳಿದ್ದರಂತೆ. ಯಶ್ ಕೂಡ ನಗುತ್ತಲೇ ‘ಆ ತುಂಟಾಟ ಮಾಡಿದ್ದು ತಾವೇ’ ಎಂದು ಒಪ್ಪಿಕೊಂಡಿದ್ದರಂತೆ!
—-





Be the first to comment