ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಸೃಷ್ಟಿಸಿರುವ ‘ಪ್ರೇಮದ ಊರಲಿ’ ಸಿನಿಮಾತಂಡ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿದೆ.
ಶಿವಣ್ಣ ನಿವಾಸದಲ್ಲಿ ಚಿತ್ರದ ನಿರ್ದೇಶಕ ಮನೋಜ್ ಕುಮಾರ್, ನಟ ಶ್ರೀರಾಮ್, ನಟಿಯರಾದ ತಪಸ್ವಿನಿ ಪೂಣಚ್ಚ, ರಮಿಕಾ ಶಿವು ಮತ್ತಿತರರು ಶಿವಣ್ಣನನ್ನು ಭೇಟಿಯಾಗಿದ್ದಾರೆ. ಈ ಕುರಿತ ವಿಡಿಯೋವೊಂದನ್ನು ಶ್ರೀರಾಮ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
‘ಡಾ. ಶಿವರಾಜ್ ಕುಮಾರ್ ಸರ್ ಅವರ ಪ್ರೀತಿ ಹಾಗೂ ಮೆಚ್ಚುಗೆಯನ್ನು ಪಡೆದಿರುವುದು ನನಗೆ ಗೌರವ ಮತ್ತು ಭಾಗ್ಯದ ವಿಷಯ. ಧನ್ಯವಾದಗಳು ಶಿವಣ್ಣ. ಮುತ್ತಣ್ಣನ ಸಿಹಿ ಮುತ್ತು ಎಂದು ಶ್ರೀರಾಮ್ ಬರೆದುಕೊಂಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್, ಗೋಲ್ಡನ್ ಸ್ಟಾರ್ ಗಣೇಶ್, ನಟ ರಮೇಶ್ ಅರವಿಂದ್, ನಟಿಯರಾದ ರಚಿತಾ ರಾಮ್, ರಶ್ಮಿಕಾ ಮಂದಣ್ಣ ಸೇರಿದಂತೆ ಅನೇಕ ಮಂದಿ ‘ಪ್ರೇಮದ ಊರಲಿ’ ಸಿನಿಮಾ ಮತ್ತು ತಂಡವನ್ನು ಶ್ಲಾಘಿಸಿದ್ದಾರೆ.
ಹಳ್ಳಿ ಸೊಗಡು, ಕೌಟುಂಬಿಕ ಕಥಾ ಹಂದರದ ‘ಪ್ರೇಮದ ಊರಲಿ’ ಸಿನಿಮಾ ನಾಡಿನಾದ್ಯಂತ ಭರ್ಜರಿ 25 ನೇ ದಿನವನ್ನು ಪೂರ್ಣಗೊಳಿಸಿದೆ. 100 ಕೋಟಿ ರೂ. ಕಲೆಕ್ಷನ್ ನತ್ತ ದಾಪುಗಾಲು ಹಾಕಿದೆ.
—–





Be the first to comment