‘ಬೆಂಗಳೂರು ವಿಶೇಷ ಸ್ಥಳ’ ಎಂದ ರಾಕುಲ್ ಪ್ರೀತ್ ಸಿಂಗ್

‘ಬೆಂಗಳೂರು ನನಗೆ  ವಿಶೇಷವಾದ ಸ್ಥಳ. ನನ್ನ ಮೊದಲ ಚಲನಚಿತ್ರ ಇಲ್ಲೇ ಆರಂಭವಾಯಿತು’ ಎಂದು  ರಕುಲ್ ಪ್ರೀತ್ ಸಿಂಗ್  ತಿಳಿಸಿದ್ದಾರೆ.

ನಿತೇಶ್ ತಿವಾರಿ ನಿರ್ದೇಶಿಸುತ್ತಿರುವ  ಪೌರಾಣಿಕ ಕಥಾಹಂದರದ ‘ರಾಮಾಯಣ’ ಚಿತ್ರದಲ್ಲಿ ರಕುಲ್ ಪ್ರೀತ್ ಸಿಂಗ್ ‘ಶೂರ್ಪನಖಿ’ ಪಾತ್ರದಲ್ಲಿ ನಟಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡ ಅವರು ತಮ್ಮ ವೃತ್ತಿಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡರು.

‘2009ರಲ್ಲಿ ಬಿಡುಗಡೆಯಾದ ನನ್ನ ಚೊಚ್ಚಲ ಕನ್ನಡ ಚಿತ್ರ ‘ಗಿಲ್ಲಿ’.  ಆ ಸಮಯದಲ್ಲಿ ನನಗೆ ನಿಜವಾಗಿಯೂ ನಟಿಯಾಗಬೇಕೆಂಬ ಆಸೆ ಇದೆಯೇ ಎಂದು  ತಿಳಿದಿರಲಿಲ್ಲ. ಕಳೆದ ವರ್ಷಗಳಲ್ಲಿ ಈ ನಗರದಿಂದ ನನಗೆ ಅಪಾರ ಪ್ರೀತಿ ಸಿಕ್ಕಿದೆ. ಇಷ್ಟು ಸಮಯದ ನಂತರ ಇಂದು ಇಲ್ಲಿ  ‘ರಾಮಾಯಣ’ದಂತಹ ಚಿತ್ರದ ಭಾಗವಾಗಿರುವುದು ನನಗೆ ವಿಶೇಷವಾದ ಭಾವನೆ ನೀಡುತ್ತಿದೆ’  ಎಂದರು.

‘ರಾಮಾಯಣ ನಮ್ಮೆಲ್ಲರ ಹೃದಯಕ್ಕೆ ತುಂಬಾ ಹತ್ತಿರವಾದದ್ದು. ಈ ಚಿತ್ರವನ್ನು ರೂಪಿಸಲು ಸಾಕಷ್ಟು ಕಠಿಣ ಪರಿಶ್ರಮ ಹಾಕಲಾಗಿದೆ.ರಣಬೀರ್, ಸಾಯಿ ಪಲ್ಲವಿ ಮತ್ತು ನಮ್ಮ ರಾವಣನ ಪಾತ್ರಧಾರಿ ಯಶ್ ಸೇರಿದಂತೆ ಪ್ರತಿಯೊಬ್ಬರೂ ಅತ್ಯುತ್ತಮ ಕೊಡುಗೆಯನ್ನು ನೀಡಿದ್ದಾರೆ. ನೀವೆಲ್ಲರೂ ಈ ಚಿತ್ರವನ್ನು ಆನಂದಿಸುತ್ತೀರಿ ಮತ್ತು ನಿಮ್ಮ ಪ್ರೀತಿಯನ್ನು ನಮ್ಮ ಮೇಲೆ ಇರಿಸುತ್ತೀರಿ ಎಂದು ನಾನು ಭಾವಿಸುತ್ತೇನೆ’ ಎಂದಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!