‘ಜೀವನದ ರಹಸ್ಯಗಳು ಬಹಿರಂಗವಾಗುವುದಿಲ್ಲ’ ಎಂದ ಸಲ್ಮಾನ್

“ನನ್ನ  ಜೀವನದ ರಹಸ್ಯಗಳು ಎಂದಿಗೂ ಬಹಿರಂಗವಾಗುವುದಿಲ್ಲ. ರಹಸ್ಯಗಳು ಸಮಾಧಿಯಲ್ಲೇ ಉಳಿಯುತ್ತವೆ” ಎಂದು ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಹೇಳಿದ್ದಾರೆ.

ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’  ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್  ಭಾಗವಹಿಸಿ ಮುಕ್ತವಾಗಿ ಮಾತನಾಡಿದ್ದಾರೆ. ನಟಿ ಕರಿಷ್ಮಾ ಕಪೂರ್ ಅವರೊಂದಿಗೆ ರಾಪಿಡ್ ಫೈರ್ ಸುತ್ತಿನಲ್ಲೂ ಭಾಗವಹಿಸಿ  ರಂಜಿಸಿದ್ದಾರೆ.

ಕರಿಷ್ಮಾ ಕಪೂರ್, ಸಲ್ಮಾನ್ ಖಾನ್ ಅವರ ಜೀವನದ ಕುರಿತು ಬಯೋಪಿಕ್ ನಿರ್ಮಿಸಿದರೆ ಯಾವ ನಿರ್ದೇಶಕರು ಸೂಕ್ತ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸಲ್ಮಾನ್  ಕಾಮಿಡಿ ಚಿತ್ರಕ್ಕೆ ಡೇವಿಡ್ ಧವನ್, ದುರಂತ ಪ್ರೇಮಕಥೆಗೆ ಸಂಜಯ್ ಲೀಲಾ ಬನ್ಸಾಲಿ, ಪ್ರೇಮಕಥೆಗೆ ಸೂರಜ್ ಬರ್ಜಾತ್ಯಾ ಮತ್ತು ಆಕ್ಷನ್ ಚಿತ್ರಕ್ಕೆ ಕಬೀರ್ ಖಾನ್ ಸೂಕ್ತ ಎಂದು ಹಾಸ್ಯಮಯ ಉತ್ತರ ನೀಡಿದ್ದಾರೆ.

ತಮ್ಮ ಜೀವನದ ಬಯೋಪಿಕ್ ವಿಚಾರಕ್ಕೆ ಬಂದಾಗ ಸಲ್ಮಾನ್ ಖಾನ್ ಖಡಕ್ ಉತ್ತರ ನೀಡಿದ್ದಾರೆ. “ನನ್ನ ಜೀವನದ ಬಯೋಪಿಕ್ ಎಂದಿಗೂ ಬರುವುದಿಲ್ಲ. ನನ್ನ ಜೀವನದ ರಹಸ್ಯಗಳು ನನ್ನ ಜೊತೆಯೇ ಸಮಾಧಿಯಾಗುತ್ತವೆ” ಎಂದು ಹೇಳಿದ್ದಾರೆ.  ತಮ್ಮ ವೈಯಕ್ತಿಕ ಬದುಕಿನ ಕಥೆಯನ್ನು ಸಿನಿಮಾ ರೂಪದಲ್ಲಿ ತೆರೆಗೆ ತರುವ ಆಸಕ್ತಿ ತಮಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಲ್ಮಾನ್ ಖಾನ್ ಅವರ ಮುಂದಿನ ಸಿನಿಮಾ  ಎ.ಆರ್. ಮುರುಗದಾಸ್ ನಿರ್ದೇಶನದ ‘ಸಿಕಂದರ್’  ಬಹುನಿರೀಕ್ಷಿತ ಯೋಜನೆಗಳಲ್ಲಿ ಒಂದಾಗಿದೆ. ಈ ಚಿತ್ರದ ಮೂಲಕ ಸಲ್ಮಾನ್   ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಗಳಿಸುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!