‘ಜೈಲರ್ 2’ ಹಿಸ್ಟರಿ ಕ್ರಿಯೇಟ್

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್ 2’ ಚಿತ್ರದ ಜಾಗತಿಕ ಮುಂಗಡ ಬುಕಿಂಗ್ ಆರಂಭವಾದ ಕೇವಲ 24 ಗಂಟೆಗಳಲ್ಲಿ 20 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆದಿದೆ.

ಅಕ್ಟೋಬರ್ 15 ರಂದು ವಿಶ್ವಾದ್ಯಂತ ತೆರೆಕಾಣಲಿರುವ ‘ಜೈಲರ್ 2’ ಚಿತ್ರಕ್ಕೆ ವಿದೇಶಿ ಮಾರುಕಟ್ಟೆಗಳಲ್ಲಿ ಅತ್ಯದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. 17 ಕೋಟಿಗೂ ಅಧಿಕ  ಹಣ ಕೇವಲ ಅಂತರರಾಷ್ಟ್ರೀಯ ಮುಂಗಡ ಬುಕಿಂಗ್‌ನಿಂದಲೇ ಹರಿದು ಬಂದಿದೆ. ಇದು ಮೊದಲ ಭಾಗ ‘ಜೈಲರ್’ ಸಿನಿಮಾದ ವಿದೇಶಿ ಪ್ರಿ-ಸೇಲ್ಸ್ ದಾಖಲೆಯನ್ನು ಹಿಂದಿಕ್ಕಿದೆ.

‘ಜೈಲರ್ 2’ ಬಿಡುಗಡೆಯ ಮೊದಲ ದಿನಕ್ಕಾಗಿ ದೇಶಾದ್ಯಂತ ಈಗಾಗಲೇ 5.32 ಕೋಟಿಗೂ ಅಧಿಕ ಮೌಲ್ಯದ ಟಿಕೆಟ್‌ಗಳು ಮಾರಾಟವಾಗಿವೆ.ದೇಶೀಯ ಮುಂಗಡ ಬುಕಿಂಗ್‌ನಲ್ಲಿ ಶೇಕಡಾ 80 ಕ್ಕಿಂತ ಹೆಚ್ಚು ಪಾಲು ತಮಿಳುನಾಡಿನದ್ದಾಗಿದ್ದು, ಚೆನ್ನೈ ಒಂದರಲ್ಲೇ ಭಾರಿ ಪ್ರಮಾಣದ ಟಿಕೆಟ್‌ಗಳು ಮಾರಾಟವಾಗಿವೆ. ತಮಿಳುನಾಡು  ₹5.05 ಕೋಟಿ ಕಲೆಕ್ಷನ್ ಮಾಡಿದೆ.

ಕರ್ನಾಟಕದಲ್ಲೂ ಬುಕಿಂಗ್ ಆರಂಭವಾಗಿದ್ದು ಸುಮಾರು 25.96 ಲಕ್ಷಕ್ಕೂ ಅಧಿಕ ಮುಂಗಡ ಬುಕಿಂಗ್ ದಾಖಲಾಗಿದೆ.   ಕೇರಳದಲ್ಲಿ ಅಕ್ಟೋಬರ್ 11 ರ ಭಾನುವಾರ ಬೆಳಗ್ಗಿನಿಂದ ಬುಕಿಂಗ್ ಪ್ರಕ್ರಿಯೆ ಚುರುಕುಗೊಂಡಿದೆ. ಭಾರತದಲ್ಲಿ ಇನ್ನೂ ಎಲ್ಲಾ ರಾಜ್ಯ ಹಾಗೂ ಚಿತ್ರಮಂದಿರಗಳಲ್ಲಿ ಬುಕಿಂಗ್ ಪೂರ್ಣ ಪ್ರಮಾಣದಲ್ಲಿ ಮುಕ್ತಾಯಗೊಂಡಿಲ್ಲ.

—-

 

Be the first to comment

Leave a Reply

Your email address will not be published. Required fields are marked *

Translate »
error: Content is protected !!