ಕರ್ನಾಟಕದಾದ್ಯಂತ ಬಾಕ್ಸ್ ಆಫೀಸ್ನಲ್ಲಿ ಯಶಸ್ಸನ್ನು ಗಳಿಸಿದ ‘ಪ್ರೇಮದ ಊರಲ್ಲಿ’ ಚಿತ್ರ ತೆಲುಗು ಪ್ರೇಕ್ಷಕರ ಹೃದಯ ಗೆಲ್ಲಲು ಸಜ್ಜಾಗಿದೆ.
‘ಪ್ರೇಮದ ಊರಲ್ಲಿ’ ತೆಲುಗು ಆವೃತ್ತಿ ಅಕ್ಟೋಬರ್ 2ರಂದು ಬಿಡುಗಡೆಯಾಗಲಿದೆ. ಸೆಪ್ಟೆಂಬರ್ 25 ರಂದು ಕೇವಲ 45 ಪ್ರದರ್ಶನಗಳೊಂದಿಗೆ ಕರ್ನಾಟಕದಾದ್ಯಂತ ಬಿಡುಗಡೆಯಾದ ‘ಪ್ರೇಮದ ಊರಲ್ಲಿ’ ಚಿತ್ರದ ದೈನಂದಿನ ಪ್ರದರ್ಶನಗಳ ಸಂಖ್ಯೆ 350 ದಾಟಿದೆ. ಸಾಧಾರಣ ಬಜೆಟ್ ಚಿತ್ರ ಈಗಾಗಲೇ 5 ಕೋಟಿ ಗಳಿಸಿದೆ. ತೆಲುಗು ಪ್ರೇಕ್ಷಕರ ಹೃದಯ ಗೆಲ್ಲಲು ಸಜ್ಜಾದ ಚಿತ್ರವನ್ನು SK ಪಿಕ್ಚರ್ಸ್ ಮತ್ತು ಮಹಾರತ್ನ ಪ್ರೊಡಕ್ಷನ್ಸ್ ವಿತರಿಸಲಿದೆ.
ರಾಷ್ಟ್ರೀಯ ಪ್ರಶಸ್ತಿ ವಿಜೇತ ಮನೋಜ್ ಕುಮಾರ್ ನಿರ್ದೇಶನ, ‘ವೆನಿಲ್ಲಾ ಎಂಟರ್ಟೈನ್ಮೆಂಟ್ಸ್’ ಮತ್ತು ‘ಜನಕಮ್ಮ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ‘ಪ್ರೇಮದ ಊರಲಿ’ ಚಿತ್ರ ಹಳ್ಳಿಯ ಹಿನ್ನೆಲೆಯುಳ್ಳ ಸರಳ ಹಾಗೂ ಹೃದಯಸ್ಪರ್ಶಿ ಕಥೆಯಾಗಿದೆ. ಈ ಚಿತ್ರ ಕೌಟುಂಬಿಕ ಬಾಂಧವ್ಯ, ಮಾನವೀಯ ಮೌಲ್ಯಗಳು ಮತ್ತು ಮುಗ್ಧ ಪ್ರೇಮದ ಮೇಲೆ ಬೆಳಕು ಚೆಲ್ಲುತ್ತದೆ.
ಶ್ರೀ ರಾಮ್, ರಮಿಕಾ ಶಿವು ಮತ್ತು ತಪಸ್ವಿನಿ ಪೂಣಚ್ಚ ಮುಖ್ಯ ಭೂಮಿಕೆಯಲ್ಲಿರುವ ‘ಪ್ರೇಮದ ಊರಲ್ಲಿ’ ಚಿತ್ರದಲ್ಲಿ ಹಿರಿಯ ನಟ ರಂಗಾಯಣ ರಘು ಕೂಡ ಅಭಿನಯಿಸಿದ್ದಾರೆ. ಸುನಾದ್ ಗೌತಮ್ ಅವರ ಇಂಪಾದ ಸಂಗೀತ ಮತ್ತು ರಾಜ್ಕಾಂತ್ ಅವರ ಅದ್ಭುತ ದೃಶ್ಯ ವೈಭವ ಚಿತ್ರದ ವಿಶೇಷತೆಗಳಾಗಿವೆ.
—–





Be the first to comment