‘ಬ್ಯಾಂಗಲ್ ಬಂಗಾರಿ’ ಚಿತ್ರಕ್ಕೆ ಚಾಲನೆ

ಶಂಕರ್ ರಾಮರೆಡ್ಡಿ ನಿರ್ಮಿಸಿ, ಮರಡಿಹಳ್ಳಿ ಚಂದ್ರ ನಾಗ್ ಅವರು ನಿರ್ದೇಶಿಸುತ್ತಿರುವ ನೂತನ ಚಿತ್ರಕ್ಕೆ ‘ಬ್ಯಾಂಗಲ್ ಬಂಗಾರಿ’ ಚಿತ್ರಕ್ಕೆ ಚಾಲನೆ ಸಿಕ್ಕಿದೆ.

ತ್ರದ ಮುಹೂರ್ತ ಸಮಾರಂಭ ನಂದಿನಿ ಬಡಾವಣೆಯ ಬಲಮುರಿ ಪ್ರಸಿದ್ಧಿ ಶ್ರೀವಿನಾಯಕ ದೇವಸ್ಥಾನದಲ್ಲಿ ನೆರವೇರಿತು. ‘ಮುಂಗಾರು ಮಳೆ’ ಚಿತ್ರದ ನಿರ್ಮಾಪಕ ಇ.ಕೃಷ್ಣಪ್ಪ ಅವರು ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಶಾಸಕ ಗೋಪಲಯ್ಯ ಅವರು ಕ್ಯಾಮೆರಾ ಚಾಲನೆ ಮಾಡಿದರು.

‘ಇದೊಂದು ಪ್ರೇಮಕಥೆ. ಜೊತೆಗೆ ಕ್ರೈಮ್  ಇದೆ. ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ಎರಡನೇ ಹಂತದ ಚಿತ್ರೀಕರಣ ಸಕಲೇಶಪುರದಲ್ಲಿ ನಡೆಸಲು ಸಿದ್ದತೆ ನಡೆಯುತ್ತಿದೆ. ನಾನೇ ಕಥೆ ಹಾಗೂ ಚಿತ್ರಕಥೆ ಬರೆದಿದ್ದೇನೆ’ ಎಂದು ನಿರ್ದೇಶಕ ಮರಡಿಹಳ್ಳಿ ಚಂದ್ರ ನಾಗ್ ತಿಳಿಸಿದರು.

ಸುನೀಲ್ ಶಶಿಧರ್, ಪ್ರಕೃತಿ ರಾಜೇಂದ್ರ ನಾಯಕ – ನಾಯಕಿಯಾಗಿ ನಟಿಸುತ್ತಿದ್ದಾರೆ. ರಂಗಾಯಣ ರಘು, ಶರತ್ ಲೋಹಿತಾಶ್ವ, ಗೋಪಾಲಕೃಷ್ಣ ದೇಶಪಾಂಡೆ, ಪ್ರಕಾಶ್ ಬೆಳವಾಡಿ, ರವಿ ಕಾಳೆ, ಸಂಪತ್ ಮೈತ್ರೇಯ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಟಾಪ್ ಸ್ಟಾರ್ ರೇಣು ಸಂಗೀತ ನಿರ್ದೇಶನ, ಸತೀಶ್ ಕೆ ಛಾಯಾಗ್ರಹಣ ಹಾಗೂ ಗಿರೀಶ್ ಕುಮಾರ್ ಅವರ ಸಂಕಲನವಿರುವ ಚಿತ್ರಕ್ಕೆ “ಫುಲ್ ಮೀಲ್ಸ್” ಚಿತ್ರದ ನಿರ್ದೇಶಕ ಎನ್ ವಿನಾಯಕ ಸಂಭಾಷಣೆ ಬರೆದಿದ್ದಾರೆ. ಹಾಡುಗಳನ್ನು ಕೆ.ಕಲ್ಯಾಣ್, ಲೋಕೇಶ್ ಕೃಷ್ಣ ಹಾಗೂ ಟಾಪ್ ಸ್ಟಾರ್ ರೇಣು ರಚಿಸಿದ್ದಾರೆ. ವಿಜಯ್ ಪ್ರಕಾಶ್, ಕೈಲಾಶ್ ಖೇರ್ , ಜಸ್ಕರಣ್ ಸಿಂಗ್, ಅನುರಾಧಾ ಭಟ್  ಹಾಡಲಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!