ಹರ್ಷವರ್ಧನ್ ನಾಯಕ ನಟನಾಗಿ ನಟಿಸುತ್ತಿರುವ ತ್ರಿಕಾರಂ ಚಿತ್ರ ಅಕ್ಟೋಬರ್ 2ರಂದು ತೆರೆಗೆ ಬರಲಿದೆ.
ಆಕ್ಷನ್, ಸೆಂಟಿಮೆಂಟ್ ಸೇರಿದಂತೆ ವಿವಿಧ ಅಂಶಗಳು ಈ ಚಿತ್ರದಲ್ಲಿವೆ. ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಟೀಸರ್ ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ ರಾಜಕೀಯ ಮುಖಂಡ ರವೀಂದ್ರ, ಹೊಸದುರ್ಗದ ಸುಬ್ಬಣ್ಣ, ನಾಯಕ ಹರ್ಷವರ್ಧನ್, ನಾಯಕಿ ನಿಶ್ಚಿತಾ ಶೆಟ್ಟಿ, ನಿರ್ದೇಶಕ ದಿಲೀಪ್ ಕುಮಾರ್ ಜೆಆರ್, ನಿರ್ಮಾಪಕ ಜಿ ಗಣೇಶ್ ಮೂರ್ತಿ ಇತರರು ಇದ್ದರು.
ನಾಯಕ ಹರ್ಷವರ್ಧನ್ ಮಾತನಾಡಿ, ನಾನು ನಿರ್ದೇಶಕನಾಗಿ ಕೆಲಸ ಮಾಡಲು ಹೋಗಿ ಈಗ ನಾಯಕನಾಗಿದ್ದೇನೆ. ಸಾಕಷ್ಟು ಕಷ್ಟಪಟ್ಟು ಸಿನಿಮಾ ಮಾಡಿದ್ದು ಎಲ್ಲರೂ ಬೆಂಬಲಿಸಬೇಕು ಎಂದು ಕೋರಿದರು.
ನಾಯಕಿ ನಿಶ್ಚಿತಾ ಶೆಟ್ಟಿ ಮಾತನಾಡಿ, ಮೀರಾ ಎನ್ನುವ ಪಾತ್ರವನ್ನು ನಾನು ಮಾಡಿದ್ದೇನೆ. ಬೆಳಗ್ಗೆ ನಾಯಕನನ್ನು ದ್ವೇಷಿಸಿ ರಾತ್ರಿ ನಾಯಕನ ಸುತ್ತ ಸುತ್ತುವ ಪಾತ್ರ ಇದು. ಇದು ಯಾಕೆ ಅನ್ನುವುದನ್ನು ತಿಳಿಯಲು ಸಿನಿಮಾ ನೋಡಬೇಕು. ತಾಂತ್ರಿಕವಾಗಿ ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದರು.
ನಿರ್ದೇಶಕ ದಿಲೀಪ್ ಕುಮಾರ್ ಅವರು, ಮೂರು ಪಾತ್ರಗಳ ಜೊತೆಗೆ ಆಧ್ಯಾತ್ಮ ಇರುವ ಹಿನ್ನೆಲೆಯಲ್ಲಿ ಚಿತ್ರಕ್ಕೆ ತ್ರಿಕಾರಂ ಎಂದು ಹೆಸರಿಡಲಾಗಿದೆ. ಇಡೀ ಚಿತ್ರವನ್ನು ಹೊಸದುರ್ಗದಲ್ಲಿ ಚಿತ್ರೀಕರಣ ಮಾಡಲಾಗಿದೆ. ಪುನರ್ಜನ್ಮದ ಕಥೆ ಚಿತ್ರದಲ್ಲಿದೆ ಎಂದರು.
ನಿರ್ಮಾಪಕ ಗಣೇಶ್ ಮೂರ್ತಿ ಅವರು, ಕಥೆ ಇಷ್ಟವಾಗಿ ಸಿನಿಮಾವನ್ನು ಮಾಡಿದ್ದೇನೆ. ಇದರ ಜೊತೆಗೆ ಖಳನಾಯಕನ ಪಾತ್ರ ನಿರ್ವಹಿಸಿದ್ದೇನೆ ಎಂದರು.
ಸಂಗೀತ ನಿರ್ದೇಶಕ ಹಾಗೂ ಗಾಯಕ ಶಶಾಂಕ್ ಶೇಷಗಿರಿ, ಛಾಯಾಗ್ರಹಕ ಯಾಸಿನ್ ಹೊನ್ನಳ್ಳಿ, ನೃತ್ಯ ನಿರ್ದೇಶಕ ಹೈಟ್ ಮಂಜು, ಇತರರು ಇದ್ದರು.





Be the first to comment