ಭಾರತ ರತ್ನ ಎಂ.ಎಸ್. ಸುಬ್ಬುಲಕ್ಷ್ಮಿ ಅವರ 110ನೇ ಜಯಂತಿಯ ಸಂದರ್ಭದಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನಾಧಾರಿತ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದೆ.
ಭಾರತೀಯ ಶಾಸ್ತ್ರೀಯ ಸಂಗೀತದ ಪವಿತ್ರ ಕ್ಷೇತ್ರವಾದ ಚೆನ್ನೈನ ‘ದಿ ಮ್ಯೂಸಿಕ್ ಅಕಾಡೆಮಿ’ಯಲ್ಲಿ ಮಹತ್ವಾಕಾಂಕ್ಷೆಯ ಚಿತ್ರವನ್ನು ಪ್ರಕಟಿಸಲಾಗಿದೆ. ಅನೇಕ ವರ್ಷಗಳ ನಿರಂತರ ಶ್ರಮ, ಹಕ್ಕುಗಳು, ಸಾಹಿತ್ಯಿಕ ಮೂಲಗಳು ಹಾಗೂ ಕುಟುಂಬದ ಸಮ್ಮತಿಯನ್ನು ಪಡೆದುಕೊಂಡು ಈ ಸಿನಿಮಾವನ್ನು ತೆರೆಗೆ ತರಲಾಗುತ್ತಿದೆ.
ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಪಾತ್ರವನ್ನು ಇಂದಿನ ತಲೆಮಾರಿನ ಜನಪ್ರಿಯ ನಟಿ ರಾಶ್ಮಿಕಾ ಮಂದಣ್ಣ ಪೋಷಿಸುತ್ತಿದ್ದಾರೆ. ಕೇವಲ ಒಬ್ಬ ಗಾಯಕಿಯಾಗಿ ಮಾತ್ರವಲ್ಲದೆ ಅವರ ಜೀವನದ ಭಾವನೆಗಳು, ಹೋರಾಟಗಳು, ಆಧ್ಯಾತ್ಮಿಕ ಪಯಣ ಹಾಗೂ ಶಕ್ತಿಯನ್ನು ಪ್ರೇಕ್ಷಕರ ಮುಂದೆ ಅತ್ಯಂತ ರೋಚಕವಾಗಿ ತೆರೆದಿಡಲು ರಾಶ್ಮಿಕಾ ಸಜ್ಜಾಗಿದ್ದಾರೆ.
ಈ ಬಯೋಪಿಕ್‌ಗೆ ಯುವಜನರ ನೆಚ್ಚಿನ ಸಂಗೀತ ಮಾಂತ್ರಿಕ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಭಾವನಾತ್ಮಕ ಕಥಾಹಂದರಕ್ಕೆ ಹೆಸರಾದ ಗೌತಮ್ ತಿನ್ನನೂರಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಭಾರತೀಯ ಚಿತ್ರರಂಗದ ಪ್ರಮುಖ ನಿರ್ಮಾಪಕರಾದ ಅಲ್ಲು ಅರವಿಂದ್, ರಾಕ್‌ಲೈನ್ ವೆಂಕಟೇಶ್ ಹಾಗೂ ಬನ್ನಿ ವಾಸು ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
—-





Be the first to comment