ಗಮನ ಸೆಳೆಯುತ್ತಿದೆ ‘ ಟಾಸ್ ‘ ಟ್ರೈಲರ್

ಅರ್ಜುನ್ ದೇವ್ ನಟನೆ ಹಾಗೂ ನಿರ್ದೇಶನದ ‘ ಟಾಸ್ ‘ ಚಿತ್ರದ ಟ್ರೈಲರ್ ಬಿಡುಗಡೆ ಆಗಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ಚಿತ್ರದ ಟ್ರೈಲರ್ ನೋಡಿದಾಗ  ಪ್ರೀತಿ, ಪ್ರೇಮ, ರಾಜಕೀಯ, ರೌಡಿಗಳ ಮಾಫಿಯಾ, ತಾಯಿಯ ಎಮೋಷನಲ್ , ತಂದೆಯ ಬಾಂಧವ್ಯ ಇದೆಲ್ಲವೂ ಇದೆ ಎಂದು ಕಂಡು ಬಂದಿದೆ.

‘ಟಾಸ್’ ಸಿನಿಮಾದ ಟ್ರೇಲರ್ ಅನ್ನು ಗೋಲ್ಡನ್‌ ಸ್ಟಾರ್‌ ಗಣೇಶ್‌ ಬಿಡುಗಡೆ ಮಾಡಿದ್ದಾರೆ. ಹೊಸ ರೀತಿಯ ಕಥೆಗಳು ಹಾಗೂ ಹೊಸ ಪ್ರತಿಭೆಗಳನ್ನು ಬೆಂಬಲಿಸುವ ಉದ್ದೇಶದಿಂದ ತಮ್ಮ ಬ್ಯಾನರ್‌ನಿಂದ ‘ಟಾಸ್’ ಸಿನಿಮಾವನ್ನು ಗಣೇಶ್ ಪ್ರೆಸೆಂಟ್ ಮಾಡುತ್ತಿದ್ದಾರೆ.

ಸೆ.18ಕ್ಕೆ ಕನ್ನಡ ಹಾಗೂ ತುಳು ಭಾಷೆಯಲ್ಲಿ ‘ಟಾಸ್‌’ ಸಿನಿಮಾ ಬಿಡುಗಡೆ ಆಗುತ್ತಿದೆ.  ಸಂಗೀತ, ಸುತೇಜ್ ಶೆಟ್ಟಿ, ಕೃತಿ ಶೆಟ್ಟಿ, ಗರುಡಾರಾಮ್, ಬಾಲಾಜಿ ಮನೋಹರ್ ನಟಿಸಿದ್ದಾರೆ.

ಟಾಸ್ ಚಿತ್ರ  ಕರ್ನಾಟಕದಲ್ಲಿ ಒಟ್ಟು 30 ಸಿಂಗಲ್ ಸ್ಕ್ರೀನ್, 40 ಮಲ್ಟಿಫ್ಲೆಕ್ಸ್ ನಲ್ಲಿ ರಿಲೀಸ್ ಆಗುತ್ತಿದೆ. 10 ಥಿಯೇಟರ್ ನಲ್ಲಿ ತುಳು ಭಾಷೆಯಲ್ಲಿ ‘ಟಾಸ್ ‘ ಬಿಡುಗಡೆ ಆಗಲಿದೆ ಎಂದು ಎಂಪಿ.ಫಿಲ್ಮ್ಸ್ ‌ ನ  ಹಂಚಿಕೆದಾರ ಮುನೀಂದ್ರ   ಮಾಹಿತಿ ನೀಡಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!