ಹೊಂಬಾಳೆ ಫಿಲ್ಮ್ಸ್ ‘ಹನುಮಾನ್ ಅಂಶ್’ ಚಿತ್ರ ವಿತರಣೆ

ಹೊಂಬಾಳೆ ಫಿಲ್ಮ್ಸ್, ಭಕ್ತಿಪ್ರಧಾನ ಚಿತ್ರ ‘ಹನುಮಾನ್ ಅಂಶ್’ ಚಿತ್ರದ ವಿದೇಶಿ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದೆ.

ಭಾರತದಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರ   ಸೆಪ್ಟೆಂಬರ್ 11ರಂದು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ. ವಿಶಾಲ್ ಚತುರ್ವೇದಿ ನಿರ್ದೇಶನ ಮತ್ತು ಬರವಣಿಗೆಯ ‘ಹನುಮಾನ್ ಅಂಶ್’ ಚಿತ್ರ  ಭಕ್ತರು ಹನುಮಂತನ ಅವತಾರವೆಂದು ನಂಬುವ ಪ್ರಸಿದ್ಧ ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಮಹಾರಾಜ್-ಜೀ ಅವರ ಜೀವನವನ್ನು ಆಧರಿಸಿದೆ.

ಭಾರತದಲ್ಲಿ ಈಗಾಗಲೇ ಬಿಡುಗಡೆಯಾಗಿರುವ ‘ಹನುಮಾನ್ ಅಂಶ್’  ಬಾಕ್ಸ್ ಆಫೀಸ್‌ನಲ್ಲಿ 63.82 ಕೋಟಿಗೂ ಅಧಿಕ ಗಳಿಕೆ ದಾಖಲಿಸಿದೆ ಎಂದು ವರದಿಯಾಗಿದೆ. ಪ್ರೇಕ್ಷಕರಿಂದ ದೊರೆತ ಉತ್ತಮ ಪ್ರತಿಕ್ರಿಯೆ ಚಿತ್ರದ ಯಶಸ್ಸಿಗೆ ಮತ್ತಷ್ಟು ಪುಷ್ಟಿ ನೀಡಿದೆ.

ಪ್ರೀತಿ, ಭಕ್ತಿ, ಸೇವೆ ಮತ್ತು ಆಧ್ಯಾತ್ಮಿಕತೆಯ ಸಂದೇಶವನ್ನು ಸಾರಿದ ಮಹಾರಾಜ್-ಜೀ ಅವರ ಪ್ರಭಾವ ಜಗತ್ತಿನಾದ್ಯಂತ ಹರಡಿದೆ.  1960 ಮತ್ತು 70ರ ದಶಕಗಳಲ್ಲಿ ಭಾರತಕ್ಕೆ ಆಗಮಿಸಿದ ಹಲವಾರು ಪಾಶ್ಚಿಮಾತ್ಯ ಆಧ್ಯಾತ್ಮಿಕ ಅನ್ವೇಷಕರ ಮೇಲೆ ಅವರ ಪ್ರಭಾವ ಗಾಢವಾಗಿತ್ತು. ಮಹಾರಾಜ್-ಜೀ ಅವರ ಆಧ್ಯಾತ್ಮಿಕ ಪ್ರಭಾವ  ಸ್ಟೀವ್ ಜಾಬ್ಸ್, ಮಾರ್ಕ್ ಜುಕರ್‌ಬರ್ಗ್, ಜೂಲಿಯಾ ರಾಬರ್ಟ್ಸ್ ಅವರಂತಹ ಜಾಗತಿಕ ವ್ಯಕ್ತಿಗಳೊಂದಿಗೆ  ಸಂಬಂಧ ಹೊಂದಿದೆ. ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಸೇರಿದಂತೆ ಹಲವು ಗಣ್ಯರು ಕೈಂಚಿ ಧಾಮ್‌ಗೆ ಭೇಟಿ ನೀಡಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!