ತಮಿಳು ನಟ ವಿಜಯ್ ಪುತ್ರ ಜೇಸನ್ ಸಂಜಯ್ ನಿರ್ದೇಶನದ ಚೊಚ್ಚಲ ಸಿನಿಮಾ ‘ಸಿಗ್ಮಾ’ ಅಕ್ಟೋಬರ್ 2ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.
ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ರಿಲೀಸ್ ಡೇಟ್ ಘೋಷಿಸಿದೆ. ಜೇಸನ್ ಸಂಜಯ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಹೊಸ ದಿನಾಂಕವನ್ನು ಹಂಚಿಕೊಂಡಿದ್ದು, ರೋಚಕ ಕಳ್ಳತನದ ಕಥಾಹಂದರದೊಂದಿಗೆ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ ಎಂದು ತಿಳಿಸಿದ್ದಾರೆ.
ಸಂದೀಪ್ ಕಿಶನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಸಿಗ್ಮಾ’ ಆ್ಯಕ್ಷನ್-ಥ್ರಿಲ್ಲರ್ ಕಥಾಹಂದರ ಹೊಂದಿದೆ. ಚಿತ್ರದ ಮೊದಲ ಹಾಡು ‘ಸಿಗ್ಮಾ ಸ್ಟೈಲ್’ ಈಗಾಗಲೇ ಬಿಡುಗಡೆಯಾಗಿದೆ. ಎಸ್. ತಮನ್ ಸಿನಿಮಾಗೆ ಸಂಗೀತ ಸಂಯೋಜಿಸಿದ್ದಾರೆ.
ವಿಜಯ್ ಅವರ ಪುತ್ರ ಜೇಸನ್ ಸಂಜಯ್ ನಟನೆಯ ಬದಲು ನಿರ್ದೇಶನ ಮತ್ತು ಚಿತ್ರಕಥೆ ಬರವಣಿಗೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಮೆರಿಕದಲ್ಲಿ ಸಿನಿಮಾ ನಿರ್ಮಾಣ ಹಾಗೂ ಸ್ಕ್ರೀನ್ರೈಟಿಂಗ್ಗೆ ಸಂಬಂಧಿಸಿದ ತರಬೇತಿ ಪಡೆದಿರುವ ಅವರು ‘ಸಿಗ್ಮಾ’ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.
ವಿಜಯ್ ಅಭಿಮಾನಿಗಳಲ್ಲೂ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿದೆ. ಜೇಸನ್ ಸಂಜಯ್ ತಮ್ಮ ತಂದೆಯ ನೆರಳಿನಿಂದ ಹೊರಬಂದು ನಿರ್ದೇಶಕರಾಗಿ ಯಾವ ರೀತಿಯ ಛಾಪು ಮೂಡಿಸಲಿದ್ದಾರೆ ಎಂಬುದಕ್ಕೆ ‘ಸಿಗ್ಮಾ’ ಮೂಲಕ ಉತ್ತರ ಸಿಗಲಿದೆ.
—-





Be the first to comment