ಪಾನ್ ಮಸಾಲಾ ಜಾಹೀರಾತಿಗೆ ನೋ ಎಂದ ಸನ್ನಿ

‘ನಾನು ಪಾನ್ ಮಸಾಲಾ ಜಾಹೀರಾತುಗಳನ್ನು ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ’ ಎಂದು ಹಿರಿಯ ನಟ  ಸನ್ನಿ ಡಿಯೋಲ್ ಹೇಳಿದ್ದಾರೆ.

ಶುಭಂಕರ್ ಮಿಶ್ರಾ ಅವರ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದ ಸನ್ನಿ ಡಿಯೋಲ್,  “ನಾನು ಪಾನ್ ಮಸಾಲಾ ಜಾಹೀರಾತು ಆಫರ್‌ಗಳು ಬರುತ್ತವೆ. ಆದರೆ ನನಗೆ ನಂಬಿಕೆ ಇಲ್ಲದ ಅಥವಾ ಸೂಕ್ತವಲ್ಲದ ವಸ್ತುಗಳನ್ನು ಪ್ರಚಾರ ಮಾಡಲು ನಾನು ಬಯಸುವುದಿಲ್ಲ. ಇಂತಹ ಉತ್ಪನ್ನಗಳನ್ನು ಉತ್ತೇಜಿಸುವುದು ಒಳ್ಳೆಯದಲ್ಲ” ಎಂದು ಹೇಳಿದ್ದಾರೆ.

“ನನ್ನ ಆತ್ಮಸಾಕ್ಷಿ ಒಪ್ಪದ ಕೆಲಸಗಳನ್ನು ನಾನು ಮಾಡುವುದಿಲ್ಲ. ನನ್ನ ಮನಸ್ಸಿಗೆ ಯಾವುದು ಸರಿ ಎನಿಸುತ್ತದೆಯೋ ಅದನ್ನು ಮಾತ್ರ ಮಾಡುತ್ತೇನೆ” ಎಂದು ಹೇಳಿದ್ದಾರೆ.

ಶಾರುಖ್ ಖಾನ್, ಅಜಯ್ ದೇವಗನ್, ಟೈಗರ್ ಶ್ರಾಫ್ ಸೇರಿದಂತೆ ಹಲವು ಬಾಲಿವುಡ್ ನಟರು ಪಾನ್ ಮಸಾಲಾ ಹಾಗೂ ಗುಟ್ಕಾ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಕ್ಕೆ ವ್ಯಾಪಕ ಟೀಕೆ ಹಾಗೂ ಕಾನೂನು ಸಂಕಷ್ಟ ಎದುರಿಸಿದ್ದರು. ಇದೀಗ ಸನ್ನಿ ಡಿಯೋಲ್ ಅವರು ಇಂತಹ ಜಾಹೀರಾತುಗಳ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

 ಸನ್ನಿ ಡಿಯೋಲ್ ಅಭಿನಯದ ‘ಬಟ್ವಾರಾ 1947’ ಆಗಸ್ಟ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ರಾಜ್‌ಕುಮಾರ್ ಸಂತೋಷಿ ನಿರ್ದೇಶನದ ಈ ಚಿತ್ರವನ್ನು ಆಮಿರ್ ಖಾನ್ ನಿರ್ಮಿಸಿದ್ದಾರೆ.  ಪ್ರೀತಿ ಜಿಂಟಾ, ಶಬಾನಾ ಆಜ್ಮಿ, ಅಲಿ ಫಜಲ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!