‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ದಾಖಲೆ

ವಿಜಯ್ ರಾಘವೇಂದ್ರ  ಅಭಿನಯದ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’  ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಭಾರತದ ಟಾಪ್-10 ಸಿನಿಮಾಗಳ ಪಟ್ಟಿಯಲ್ಲಿ ಸತತ 15 ವಾರಗಳ ಕಾಲ ಸ್ಥಾನ ಕಾಯ್ದುಕೊಂಡಿದೆ.

ಈ ಚಿತ್ರ 250 ಮಿಲಿಯನ್‌ಗಿಂತಲೂ ಹೆಚ್ಚು  ಸ್ಟ್ರೀಮಿಂಗ್ ನಿಮಿಷಗಳನ್ನು ದಾಖಲಿಸಿ  ಹೆಮ್ಮೆಯ ಅಧ್ಯಾಯ ಬರೆದಿದೆ. ವಿಜಯ್ ರಾಘವೇಂದ್ರ, ಗೋಪಾಲಕೃಷ್ಣ ದೇಶಪಾಂಡೆ,  ಸಾಗರ್ ಪುರಾಣಿಕ್ ಅಭಿನಯದ ಚಿತ್ರದ  ಥ್ರಿಲ್ಲರ್ ಕಥಾಹಂದರ, ನೈಜ ಅಭಿನಯ ಮತ್ತು   ಕುತೂಹಲ ಉಳಿಸಿಕೊಳ್ಳುವ ಚಿತ್ರಕಥೆ ಪ್ರೇಕ್ಷಕರನ್ನು  ಸೆಳೆಯುವಲ್ಲಿ ಯಶಸ್ವಿಯಾಗಿದೆ.

ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಸಸ್ಪೆನ್ಸ್, ಭಾವನಾತ್ಮಕ ಅಂಶಗಳು ಹಾಗೂ ನೈಜತೆಯ ಸಮತೋಲನದೊಂದಿಗೆ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.  ಈ ವರ್ಷದ  ಹೆಚ್ಚು ಚರ್ಚೆಯಾದ ಕನ್ನಡ ಥ್ರಿಲ್ಲರ್‌ಗಳಲ್ಲಿ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’  ಸಿನಿಮಾ ಒಂದಾಗಿ  ಗುರುತಿಸಿಕೊಂಡಿದೆ.

‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಚಿತ್ರದ ಪ್ರಸ್ತುತಕರಾಗಿ ನಿರ್ಮಾಪಕ ಪವನ್ ಒಡೆಯರ್  ಬೆಂಬಲ ನೀಡಿದ್ದಾರೆ.  ದೇವಿಪ್ರಸಾದ್ ಶೆಟ್ಟಿ ಹಾಗೂ ಸಾತ್ವಿಕ್ ಹೆಬ್ಬಾರ್ ಜಂಟಿ ನಿರ್ಮಾಣದ ಈ ಸಿನಿಮಾ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲೂ ಯಶಸ್ವಿ ಪ್ರದರ್ಶನ ಕಂಡಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!