‘ಎ ಫಾರ್ ಆನಂದ್’ ಚಿತ್ರದಲ್ಲಿ ಮಾಧುರಿ ದೀಕ್ಷಿತ್ ?

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್  ಅವರ ‘ಎ ಫಾರ್ ಆನಂದ್’ ಚಿತ್ರದಲ್ಲಿ ಪ್ರಮುಖ ಪಾತ್ರಕ್ಕಾಗಿ ಮಾಧುರಿ ದೀಕ್ಷಿತ್ ಅವರನ್ನು ಸಂಪರ್ಕಿಸಿದ್ದು, ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ.

‘ಘೋಸ್ಟ್’ ನಂತರ ನಿರ್ದೇಶಕ ಶ್ರೀನಿ ಮತ್ತು ಶಿವರಾಜ್‌ಕುಮಾರ್ ಮತ್ತೆ ‘ಎ ಫಾರ್ ಆನಂದ್’ ಚಿತ್ರದ ಮೂಲಕ ಒಂದಾಗುತ್ತಿದ್ದಾರೆ. ಮೂಲಗಳ ಪ್ರಕಾರ ಪ್ರಮುಖ ಪಾತ್ರಕ್ಕಾಗಿ ಮಾಧುರಿ ದೀಕ್ಷಿತ್ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಬಾಲಿವುಡ್ ಐಕಾನ್  ನ್ನು ಕನ್ನಡ ಚಿತ್ರರಂಗಕ್ಕೆ ತರುವಲ್ಲಿ ಶ್ರೀನಿ ಯಶಸ್ವಿಯಾಗುತ್ತಾರೆಯೇ ಎಂದು ನೋಡಬೇಕಾಗಿದೆ.

‘ಎ ಫಾರ್ ಆನಂದ್’  ಚಿತ್ರ ಹ್ಯಾಟ್ರಿಕ್ ಹೀರೋ ಅವರ ವೃತ್ತಿಜೀವನದ ಭಾವನಾತ್ಮಕ ಮೌಲ್ಯ ಹೊಂದಿರುವ ಶೀರ್ಷಿಕೆಯಾಗಿದೆ. ‘ಆನಂದ್’ ಶಿವರಾಜ್‌ಕುಮಾರ್ ಅಭಿನಯದ ಅವರ ಚೊಚ್ಚಲ ಚಿತ್ರವಾಗಿತ್ತು. ಈಗ  ಗೀತಾ ಪಿಕ್ಚರ್ಸ್ ಈ ಪ್ರಾಜೆಕ್ಟ್ ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ.

ಚಿತ್ರದ ತಾರಾಗಣವನ್ನು ಗೌಪ್ಯವಾಗಿಡಲಾಗಿದೆ. ‘ಎ ಫಾರ್ ಆನಂದ್’   ಚಿತ್ರ  ಶಿಕ್ಷಕ-ವಿದ್ಯಾರ್ಥಿ ಬಾಂಧವ್ಯದ ಕಥೆ ಎಂದು ಶ್ರೀನಿ  ಬಣ್ಣಿಸಿದ್ದಾರೆ. ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜ್‌ಕುಮಾರ್ ನಿರ್ಮಿಸಿರುವ ಈ ಚಿತ್ರ  ಶೀಘ್ರದಲ್ಲೇ ತೆರೆಗೆ ಬರುವ ನಿರೀಕ್ಷೆಯಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!