ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ತಾರಾಗಣ ಪಡೆದಿದ್ದಾರೆ ಎನ್ನಲಾದ ಬರೋಬ್ಬರಿ ಸಂಭಾವನೆ ಭಾರಿ ಚರ್ಚೆಗೆ ಕಾರಣವಾಗಿದೆ.
‘ಟಾಕ್ಸಿಕ್’ ಸಿನಿಮಾದಲ್ಲಿ ರಾಯ ಮತ್ತು ಟಿಕೆಟ್ ಎಂಬ ದ್ವಿಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಯಶ್‌ಗೆ ಬರೋಬ್ಬರಿ 50 ಕೋಟಿ ರೂ. ಸಂಭಾವನೆ ನೀಡಲಾಗಿದೆ. ನಟನೆಯ ಜೊತೆಗೆ ಯಶ್ ಈ ಸಿನಿಮಾದ ಸಹ-ಬರಹಗಾರ ಹಾಗೂ ಸಹ-ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ. ಸಿನಿಮಾದ ಲಾಭದಲ್ಲೂ ಅವರಿಗೆ ಪಾಲು ಸಿಗಲಿದೆ ಎಂಬ ವರದಿಗಳಿವೆ.
ಚಿತ್ರದ ನಾಯಕಿ ಕಿಯಾರಾ ಅಡ್ವಾಣಿ ಅವರಿಗೆ 15 ಕೋಟಿ ರೂ. ಸಂಭಾವನೆ ನೀಡಲಾಗಿದೆ. ನಯನತಾರಾ ಅವರಿಗೆ 12ರಿಂದ 18 ಕೋಟಿ ರೂ.ವರೆಗೆ ಸಂಭಾವನೆ ಸಿಕ್ಕಿದೆ ಎನ್ನಲಾಗಿದೆ. ರುಕ್ಮಿಣಿ ವಸಂತ್ ‘ಟಾಕ್ಸಿಕ್’ ಚಿತ್ರಕ್ಕಾಗಿ ಅವರು 3ರಿಂದ 5 ಕೋಟಿ ರೂ. ಪಡೆದಿದ್ದಾರೆ. ಹುಮಾ ಖುರೇಷಿ ಹಾಗೂ ತಾರಾ ಸುತಾರಿಯಾ ತಲಾ 2ರಿಂದ 3 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಗಳು ಹೇಳುತ್ತಿವೆ.
ತಾರೆಯರ ಸಂಭಾವನೆಗೆ ಸಂಬಂಧಿಸಿದ ಈ ಯಾವುದೇ ಸಂಭಾವನೆ ಮೊತ್ತಗಳನ್ನು ‘ಟಾಕ್ಸಿಕ್’ ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿಲ್ಲ. ಗೀತೂ ಮೋಹನ್‌ದಾಸ್ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಸ್ಟ್ 26ರಂದು ವಿಶ್ವಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.
—-





Be the first to comment