ವಿಜಯ್-ತ್ರಿಷಾ ಮದುವೆ ತಡೆದಿದ್ದು ಆ ವ್ಯಕ್ತಿ!

‘ವಿಜಯ್ ಮತ್ತು ತ್ರಿಶಾ ಮದುವೆ ತಡೆದಿದ್ದು ವಿಜಯ್ ಅವರ ತಂದೆ ಎಸ್.ಎ. ಚಂದ್ರಶೇಖರ್’  ಎಂದು ಹಿರಿಯ ನಟಿ ಕುಟ್ಟಿ ಪದ್ಮಿನಿ ಹೇಳಿದ್ದಾರೆ.

ದಳಪತಿ ವಿಜಯ್ ‘ತಮಿಳಕ ವೆಟ್ರಿ ಕಳಗಂ’ ರಾಜಕೀಯ ಪಕ್ಷ ಪ್ರಾರಂಭಿಸಿದ ನಂತರ ತ್ರಿಷಾ ಅವರೊಂದಿಗಿನ ಸಂಬಂಧದ ಬಗ್ಗೆ  ಚರ್ಚೆ ಆರಂಭವಾಗಿದೆ. ಕೆಲವು ತಿಂಗಳ ಹಿಂದೆ ವಿಜಯ್ ಮತ್ತು ಪತ್ನಿ ಸಂಗೀತಾ ನಡುವಿನ ವಿಚ್ಛೇದನ ಪ್ರಸಂಗಕ್ಕೆ ತ್ರಿಷಾ ಕಾರಣ ಎಂಬ ವದಂತಿಗಳು ಹರಡಿದೆ. ಕುಟ್ಟಿ ಪದ್ಮಿನಿ ಸಂದರ್ಶನದಲ್ಲಿ ವಿಜಯ್ ಮತ್ತು ತ್ರಿಶಾ ಸಂಬಂಧದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

‘ತ್ರಿಷಾ ನನಗೆ ಮಗಳಿದ್ದಂತೆ. ಅನಗತ್ಯವಾಗಿ ಅವರನ್ನು ನಿಂದಿಸುವುದು ದುಃಖಕರ. ತ್ರಿಷಾ ವಿಜಯ್ ಅವರೊಂದಿಗೆ ಸ್ನೇಹಿತರಾಗಿದ್ದ ಕಾರಣ ವಿಜಯ್ ಅವರ ಜೀವನದಲ್ಲಿ ಬಿರುಗಾಳಿ ಎದ್ದಿದೆ ಎಂದು ಹೇಳುವುದು ಸಂಪೂರ್ಣ ಸುಳ್ಳು . ವಿಜಯ್ ಮತ್ತು ಸಂಗೀತಾ ನಡುವಿನ ಬಿರುಕು ಇತ್ತೀಚೆಗೆ ಆಗಿದ್ದಲ್ಲ. ಇಬ್ಬರ ನಡುವೆ ಹಲವು ವರ್ಷಗಳಿಂದ  ಸಮಸ್ಯೆ ಇತ್ತು. ಗಂಡ ಹೆಂಡತಿ ನಡುವೆ ಸಾವಿರ ಕಾರಣಗಳಿರಬಹುದು. ಆದರೆ ಎಲ್ಲದಕ್ಕೂ ಒಬ್ಬ ಮಹಿಳೆಯನ್ನು ಮಾತ್ರ ದೂಷಿಸುವುದು ಸಂಪೂರ್ಣವಾಗಿ ತಪ್ಪು’ ಎಂದು ಹೇಳಿದ್ದಾರೆ.

‘2004ರಲ್ಲಿ ಬಿಡುಗಡೆಯಾದ ‘ಗಿಲ್ಲಿ’ ಚಿತ್ರೀಕರಣದ ಸಮಯದಲ್ಲಿ ವಿಜಯ್ ಮತ್ತು ತ್ರಿಶಾ ಪ್ರೀತಿಯಲ್ಲಿ ಬಿದ್ದಿದ್ದರು ಎಂಬುದು ನಿಜ.  ಅವರು ಒಟ್ಟಿಗೆ ಸೇರದಿರಲು ವಿಜಯ್ ಅವರ ತಂದೆ ಎಸ್.ಎ. ಚಂದ್ರಶೇಖರ್ ಕಾರಣ. ಅವರು ಈ ಸಂಬಂಧದಲ್ಲಿ ಆಸಕ್ತಿ ಹೊಂದಿರಲಿಲ್ಲ. ನಂತರ ಅವರು ಹಲವು ವರ್ಷಗಳ ಕಾಲ ಭೇಟಿಯಾಗಲಿಲ್ಲ. ಅವರು ಬಹಳ ಸಮಯದ ನಂತರ ಮತ್ತೆ ಒಟ್ಟಿಗೆ ನಟಿಸಿದರು. ವಿಜಯ್ ಅವರ ಕೌಟುಂಬಿಕ ಸಮಸ್ಯೆಗಳಿಗೆ ತ್ರಿಶಾ ಕಾರಣ ಎಂಬುದು ಸಂಪೂರ್ಣವಾಗಿ ಸುಳ್ಳು’ ಎಂದು  ಹೇಳಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!